BLR Today
ಶನಿವಾರ, ಸೆಪ್ಟೆಂಬರ್ 26, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿVidhana Soudha1 ಗಂಟೆಗಳ ಹಿಂದೆ

HD ದೇವೇಗೌಡ ಅವರು ಪ್ರಾಣ ಹೋದರೂ ರೈತರನ್ನು ಬಿಟ್ಟುಕೊಡಲ್ಲ, ಅವರಿಗಾಗಿ ಜೈಲಿಗೆ ಹೋಗಲು ನಾನು ಸಿದ್ಧ ಎಂದು ಧೈರ್ಯ ತುಂಬಿದರು

HD ದೇವೇಗೌಡ ಅವರು ಪ್ರಾಣ ಹೋದರೂ ರೈತರನ್ನು ಬಿಟ್ಟುಕೊಡಲ್ಲ, ಅವರಿಗಾಗಿ ಜೈಲಿಗೆ ಹೋಗಲು ನಾನು ಸಿದ್ಧ ಎಂದು ಧೈರ್ಯ ತುಂಬಿದರು
ಚಿತ್ರ: Kannada Prabha

ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಎ.ಮಂಜುನಾಥ್ ಭೇಟಿ ನೀಡಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬರಲೇಬೇಕು ಎಂದು ರೈತ ಮಹಿಳೆಯರು ಹಾಗೂ ರೈತ ಮುಖಂಡರು ನಿಖಿಲ್ ಕುಮಾರಸ್ವಾಮಿ ಎದುರು ಘೋಷಣೆಗಳನ್ನು ಕೂಗಿದರು. ವೀಡಿಯೋ ಕಾಲ್ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ.ದೇವೇಗೌಡರು, 'ಪ್ರಾಣ ಹೋದರೂ ನಾನು ರೈತರನ್ನು ಬಿಟ್ಟುಕೊಡುವುದಿಲ್ಲ. ಅಗತ್ಯಬಿದ್ದರೆ ರೈತರ ಹಕ್ಕುಗಳಿಗಾಗಿ ವಿಧಾನಸೌಧದ ಮುಂದೆ ಧರಣಿ ಕುಳಿತುಕೊಳ್ಳಲು ಸಿದ್ಧ, ಜೈಲಿಗೆ ಹೋಗಲು ನಾನು ಸಿದ್ಧ' ಎಂದು ರೈತರಿಗೆ ಧೈರ್ಯ ತುಂಬಿದರು.

ಮೂಲ ವರದಿ: Kannada Prabha ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
RamanagaraFarmers' ProtestHD DevegowdaNikhil KumaraswamyJDS