ಜಯನಗರದ ಗಂಗಾಧರೇಶ್ವರ ದೇವಸ್ಥಾನದ 24ನೇ ವಾರ್ಷಿಕೋತ್ಸವ ಸಂಭ್ರಮ
ಜಯನಗರದ ಗಂಗಾಧರೇಶ್ವರ ದೇವಸ್ಥಾನದ 24ನೇ ವಾರ್ಷಿಕೋತ್ಸವದ ವಿಜೃಂಭಣೆಯಿಂದ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆದ ಪಲ್ಲಕ್ಕಿ ಮೆರವಣಿಗೆಗೆ ವಿವಿಧ ಕಲಾತಂಡಗಳು, ಮಹಿಳಾ ಭಜನಾ ಮಂಡಳಿಗಳು ವಿಶೇಷ ಮೆರಗು ನೀಡಿದವು. ವಾರ್ಷಿಕೋತ್ಸವದ ಅಂಗವಾಗಿ ಗಂಗಾಧರೇಶ್ವರನ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದೇಗುಲದ ಪ್ರವೇಶ ದ್ವಾರ, ಪ್ರಾಂಗಣದಲ್ಲಿಯೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
JayanagarBengaluruTempleFestival


