BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBanashankari1 ದಿನಗಳ ಹಿಂದೆ

ಬನಶಂಕರಿದೇವಿ ಜಾತ್ರೋತ್ಸವ ನವೆಂಬರ್ 27ರಿಂದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭ

ಬನಶಂಕರಿದೇವಿ ಜಾತ್ರೋತ್ಸವ ನವೆಂಬರ್ 27ರಿಂದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭ
ಚಿತ್ರ: Prajavani

ನಿಡಗುಂದಿ: ಪಟ್ಟಣದ ಆರಾಧ್ಯ ದೇವತೆ ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನವೆಂಬರ್ 27ರಿಂದ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ನ. 27ರಂದು ಬೆಳಿಗ್ಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪುರವಂತರ ಸೇವೆಯೊಂದಿಗೆ ಬನಶಂಕರಿದೇವಿ ದೇವಸ್ಥಾನಕ್ಕೆ ಕುಂಭ ಮೆರವಣಿಗೆ ನಡೆಯಲಿದೆ. ಬಳಿಕ ದೇವಿಗೆ ಕುಂಭಾಭಿಷೇಕ, ಸಂಜೆ ಮಾಲೆ ಉತ್ಸವ ಹಾಗೂ ರಾತ್ರಿ ನಾಟಕ ಪ್ರದರ್ಶನ ಜರುಗಲಿದೆ. ನ.28ರಂದು ಬೆಳಿಗ್ಗೆ ಕಳಸೋತ್ಸವ, ಸಂಜೆ ರಥೋತ್ಸವ, ರಾತ್ರಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನ. 29ರಂದು ಮಧ್ಯಾಹ್ನ ಗೊಂಬೆ ಕುಣಿತ, ಕುದುರೆಗಳ ಕುಣಿತ, ಡೊಳ್ಳು ಮತ್ತು ಚೌಡಕಿ ಮೇಳದೊಂದಿಗೆ ದ್ಯಾಮವ್ವನ ಸೋಗು ನಡೆಯಲಿದೆ. ನಂತರ ಜಂಗೀ ಕುಸ್ತಿ ಪಂದ್ಯಗಳು ಹಾಗೂ ರಾತ್ರಿ ರಸಮಂಜರಿ ಜರುಗಲಿವೆ. ನ. 30ರಂದು ರಾತ್ರಿ ನಾಟಕ ಪ್ರದರ್ಶನ ನಡೆಯಲಿದ್ದು, ಡಿ. 2ರಂದು ಬೆಳಗ್ಗೆ ಕಳಸ ಇಳಿಸುವ ಕಾರ್ಯಕ್ರಮ, ಸಂಜೆ ದೇವಿಯ ಕಳಸದ ಮರುಆಗಮನದೊಂದಿಗೆ ಜಾತ್ರಾ ಮಹೋತ್ಸವ ಮಂಗಲಗೊಳ್ಳಲಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruReligionFestivalBanashankari