BLR Today
ಗುರುವಾರ, ಅಕ್ಟೋಬರ್ 15, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿMalleshwaram3 ಗಂಟೆಗಳ ಹಿಂದೆ

ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸರಪಳಿ ಪವಾಡ ಉತ್ಸವ ಅ.22ರಂದು

ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸರಪಳಿ ಪವಾಡ ಉತ್ಸವ ಅ.22ರಂದು
ಚಿತ್ರ: Prajavani

ನಗರದ ಏಳು ಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸರಪಳಿ ಪವಾಡ ಉತ್ಸವ ಅ.22ರಂದು ಸಂಜೆ 4 ಗಂಟೆಯಿಂದ ಆರಂಭವಾಗಲಿದೆ. ಅಂದು ಸ್ವಾಮಿಯನ್ನು ತೇರುಮಲ್ಲೇಶ್ವರ ದೇವಾಲಯಕ್ಕೆ ಕರೆದೊಯ್ದು, ಅಲ್ಲಿಂದ ಅಂಬಿನೋತ್ಸವ ನಡೆಸಲಾಗುತ್ತದೆ. ಬಳಿಕ ಸ್ವಾಮಿಯ ದೇವಾಲಯದಲ್ಲಿ ತಂಗಿ, ಮರುದಿನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರ ಮನೆಗಳಲ್ಲಿ ಹಣ್ಣು, ತುಪ್ಪದ ಮಣೇವು ಕಾರ್ಯಕ್ರಮ ನಡೆಯುತ್ತದೆ. ಸಂಜೆ ದೇವಾಲಯದ ಮುಂಭಾಗದಲ್ಲಿ ಇರುವ ಕಲ್ಲು ಕಂಬಕ್ಕೆ ಕಟ್ಟಿದ ಸರಪಳಿಯನ್ನು ಉಪವಾಸ ನಿರತ ಗೊರವಯ್ಯನವರು ಎಳೆದು ತುಂಡರಿಸುವ ಪವಾಡ ನಡೆಯಲಿದೆ ಎಂದು ಧರ್ಮಾದಾಯ ದತ್ತಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ನವರಾತ್ರಿಯ 9 ದಿನ ಸರಪಳಿಗೆ ಬಲಿ ಪೂಜೆ, ಹೋಮ, ಗಂಗಾಪೂಜೆ ನಡೆಸಲಾಗುವುದು. ಆಯುಧಪೂಜೆ ದಿನ ಕುದುರೆ ಪೂಜೆ ನಡೆಸಿ, ನವರಾತ್ರಿ ದಿನ ಮೈಲಾರ ದೇವರ ಉತ್ಸವ ಮೂರ್ತಿಯನ್ನು 7 ಅಡಿ ಎತ್ತರದ ಬೃಹತ್ ಗಾತ್ರದ ಕುದುರೆ ಮೇಲೆ ಪ್ರತಿಷ್ಠಾಪಿಸಿ ಅಂಬಿನೋತ್ಸವಕ್ಕೆ ಕರೆದೊಯ್ಯಲಾಗುತ್ತದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
MalleshwaramBengaluruFestivalReligion