BLR Today
ಶುಕ್ರವಾರ, ನವೆಂಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧMalleshwaram1 ಗಂಟೆಗಳ ಹಿಂದೆ

ಬೆಂಗಳೂರಿನಲ್ಲಿ ಪೋಕ್ಸೊ ಕಾಯ್ದೆಯ ದುರುಪಯೋಗಕ್ಕೆ ಹೈಕೋರ್ಟ್ ಕೆಂಡಾಮಂಡಲ

ಬೆಂಗಳೂರಿನಲ್ಲಿ ಪೋಕ್ಸೊ ಕಾಯ್ದೆಯ ದುರುಪಯೋಗಕ್ಕೆ ಹೈಕೋರ್ಟ್ ಕೆಂಡಾಮಂಡಲ
ಚಿತ್ರ: Prajavani

ಮಗುವಿನ ಕಸ್ಟಡಿ ಮತ್ತು ಭೇಟಿಯ ಹಕ್ಕುಗಳಿಗೆ ತಡೆಯೊಡ್ಡುವ ದುರುದ್ದೇಶದಿಂದ, ಪೋಕ್ಸೊ ಪ್ರಕರಣವನ್ನು ರದ್ದುಪಡಿಸಿರುವ ಹೈಕೋರ್ಟ್, ‘ಒಂದು ವೇಳೆ ಪತಿ ಇಚ್ಛೆಪಟ್ಟಲ್ಲಿ ಪತ್ನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬಹುದು’ ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ. ‘ನಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಪತಿ, ಅವರ ತಂದೆ, ತಾಯಿ ಮತ್ತು ಸಹೋದರಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. ‘ಹಾಲಿ ಪ್ರಕರಣದಲ್ಲಿ ಪತ್ನಿ ತನ್ನ ಪತಿಯ ವಿರುದ್ಧ ಹೊರಿಸಿರುವ ಮೂರೂವರೆ ವರ್ಷದ ಮಗಳ ಮೇಲಿನ ಲೈಂಗಿಕ ದೌರ್ಜನ್ಯದ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ–2012) ಪ್ರಕರಣಕ್ಕೆ ವೈದ್ಯಕೀಯ ಆಧಾರಗಳೇ ಇಲ್ಲ. ಇದು ಹೆತ್ತ ತಾಯಿಯೊಬ್ಬರು ಹೆಣೆದ ಕಟ್ಟುಕಥೆ’ ಎಂದು ಬಣ್ಣಿಸಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPOCSO ActHigh CourtLegal Ruling