ಬಾಡೂಟಕ್ಕೆ ಕರೆದು ಏಳು ಜನರ ತಿಥಿ ಮಾಡಿದ ಆರೋಪಿ ಇಂದುಶೇಖರ್
ಬಾಡೂಟಕ್ಕೆ ಕರೆದು ಏಳು ಜನರ ತಿಥಿ ಮಾಡಿದ ಆರೋಪಿ ಇಂದುಶೇಖರ್. ಬಾಡೂಟಕ್ಕೆ ಕರೆದು 7 ಜನರನ್ನೂ ಆರೋಪಿ ಇಂದುಶೇಖರ್ ಹತ್ಯೆ ಮಾಡಿರುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಹದಿನೈದು ದಿನಗಳ ಅಂತರದಲ್ಲಿ ಏಳು ಜನರ ಬರ್ಬರ ಹತ್ಯೆ ಮಾಡಿದ್ದಾನೆ. ಮೊದಲಿಗೆ ತನ್ನ ಹೆಂಡತಿ ಸುನೀತಾಳನ್ನು ಕೊಲೆ ಮಾಡಿದ್ದ. ಆನಂತರ ಅತ್ತೆ ರೂಪಾವತಿಗೆ ಕರೆ ಮಾಡಿ ಆರೋಪಿಯ ಅಪ್ರಾಪ್ತ ಮಗಳು ಬಾಡೂಟಕ್ಕೆ ಕರೆದಿದ್ದಳು. ಊಟಕ್ಕೆ ಬಂದ ಅತ್ತೆಯನ್ನು ರುಬ್ಬುವ ಗುಂಡು ಬಳಸಿ ಕೊಲೆ ಮಾಡಿದ್ದ. ಇದನ್ನೂ ಓದಿ: ರಕ್ತ ಸೋರಬಾರದು ಅಂತ 9 ಪ್ಲಾಸ್ಟಿಕ್ ಚೀಲಗಳಲ್ಲಿ ಒಂದು ಶವ ತುಂಬಿದ್ದ ಹಂತಕ ಮೃತದೇಹದ ಎಸೆದು ಅಪ್ಪ-ಮಗಳು ಮನೆ ಕ್ಲೀನ್ ಮಾಡಿದ್ದರು. ನಂತರ ಬಾಮೈದುನಾ ಶಿವಕುಮಾರ್ ಮತ್ತು ದಿವ್ಯಾಳ ಕೊಲೆ ನಡೆದಿದೆ. ಈ ವೇಳೆ ಆರೋಪಿಯು ದಂಪತಿಯನ್ನು ಕೊಂದು ಮುಗಿಸಿದ್ದ. ಆ ಬಳಿಕ ಶಂಕರ್ ಮತ್ತು ನಳಿನಾ, ದಂಪತಿಯನ್ನು ಊಟಕ್ಕೆ ಕರೆದಿದ್ದ. ಪ್ರತಿ ಬಾರಿ ಇಂದುಶೇಖರ್ ಮಗಳ ಕೈಯಿಂದಲೇ ಕರೆ ಮಾಡಿಸಿ ಮನೆಗೆ ಕರೆಸಿದ್ದ. ಕೊನೆಯದಾಗಿ ಶಂಕರ್ ಮತ್ತು ನಳಿನಾ, ಏಳು ವರ್ಷದ ಮಗನನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಅ.16ರಿಂದ 31ರವರೆಗೆ 15 ದಿನದಲ್ಲಿ 7 ಕೊಲೆ – ನರಮೇಧಕ್ಕೆ ಮಗಳು ಸಾಥ್, ತಪ್ಪೊಪ್ಪಿಕೊಂಡ ಹಂತಕ

