BLR Today
ಶನಿವಾರ, ಅಕ್ಟೋಬರ್ 3, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ರಾಜ್ಯ ಸರ್ಕಾರವು ನವೋದ್ಯಮಗಳನ್ನು ಸರ್ಕಾರಿ ಇಲಾಖೆಗಳಲ್ಲಿ ತೊಡಗಿಸಿಕೊಳ್ಳಲು ನವೋದ್ಯಮ ನೀತಿ 2025–30 ಅಡಿಯಲ್ಲಿ ಹೆಜ್ಜೆ ಇಟ್ಟಿದೆ

ರಾಜ್ಯ ಸರ್ಕಾರವು ನವೋದ್ಯಮಗಳನ್ನು ಸರ್ಕಾರಿ ಇಲಾಖೆಗಳಲ್ಲಿ ತೊಡಗಿಸಿಕೊಳ್ಳಲು ನವೋದ್ಯಮ ನೀತಿ 2025–30 ಅಡಿಯಲ್ಲಿ ಹೆಜ್ಜೆ ಇಟ್ಟಿದೆ
ಚಿತ್ರ: Prajavani

ಸರ್ಕಾರಿ ಇಲಾಖೆಗಳ ಅಗತ್ಯಗಳಿಗೆ ತಕ್ಕಂತೆ ನವೋದ್ಯಮಗಳ ಆವಿಷ್ಕಾರ, ತಂತ್ರಜ್ಞಾನ ಮತ್ತು ಸೇವೆಯನ್ನು ಬಳಸಿಕೊಳ್ಳುವತ್ತ ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ. ನವೋದ್ಯಮ ನೀತಿ 2025–30ರ ಅಡಿಯಲ್ಲಿ ಸರ್ಕಾರವೇ ನವೋದ್ಯಮಗಳ ಮೊದಲ ಗ್ರಾಹಕನಾಗುವ (ಗೌವರ್ನಮೆಂಟ್ ಫಸ್ಟ್‌) ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಈ ಕುರಿತು ಮಾಹಿತಿ ತಂತ್ರಜ್ಞಾನ ಇಲಾಖೆಯು ಮಾರ್ಗಸೂಚಿ ಬಿಡುಗಡೆ ಮಾಡಿದೆ. ನಿಗದಿತ ಮಾನದಂಡಗಳನ್ನು ಪೂರೈಸಿ ಆಯ್ಕೆಯಾಗುವ ನವೋದ್ಯಮಗಳಿಗೆ ತಲಾ ₹ 25 ಲಕ್ಷ ವೆಚ್ಚದ ಕಾರ್ಯಾದೇಶ ಸಿಗಲಿದೆ. ಮೂರು ವರ್ಷಗಳಲ್ಲಿ ನೂರು ನವೋದ್ಯಮಗಳಿಗೆ ಇಲಾಖೆಗಳೊಡನೆ ಕೆಲಸ ಮಾಡುವ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಇಲಾಖೆಗಳ ಸಾಂಪ್ರದಾಯಿಕ ಕಾರ್ಯವೈಖರಿಯನ್ನು ಬದಲಿಸಿ, ಫಲಿತಾಂಶ ಕೇಂದ್ರಿತವಾದ ಹೊಸ ವೇಗವನ್ನು ರೂಢಿಸಿಕೊಳ್ಳುವಂತೆ ಮಾಡಲು ನವೋದ್ಯಮಗಳ ಸಹಯೋಗ ಪಡೆಯುವುದು ಸರ್ಕಾರದ ಆಶಯ. ಸರಕು, ಸೇವೆ ಮತ್ತು ಇಲಾಖೆಗಳ ಸಮಸ್ಯೆಗಳಿಗೆ ಪರಿಹಾರದ ಕ್ಷೇತ್ರಗಳಲ್ಲಿ ನವೋದ್ಯಮಗಳನ್ನು ಬಳಸಿಕೊಳ್ಳಲಾಗುವುದು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruStartupGovernment PolicyTechnology