ಸಂವಿಧಾನ ರಕ್ಷಣೆ ಮತ್ತು ಬೌದ್ಧ ಧರ್ಮ ಅರಿವು– ಸ್ವಾಭಿಮಾನಿ ಸಮಾವೇಶ ಸೆ.30ಕ್ಕೆ
ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ವತಿಯಿಂದ ಸೆ.30ರಂದು ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ ಗಾಂಧಿ ಭವನದಲ್ಲಿ ಸಂವಿಧಾನ ರಕ್ಷಣೆ ಮತ್ತು ಬೌದ್ಧ ಧರ್ಮ ಅರಿವು– ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಿತಿ ರಾಜ್ಯ ಘಟಕ ಸಂಚಾಲಕ ತಿರುಪಾಳ್ಯ ಮುನಿರಾಜು ತಿಳಿಸಿದರು. ಸಮಾವೇಶದಲ್ಲಿ ಚಿಂತಕ ಹ.ರಾ.ಮಹೇಶ್, ಲೇಖಕ ನಾಗಸಿದ್ದಾರ್ಥ ಹೊಲೆಯರ್ ಸೇರಿದಂತೆ ಚಿಂತಕರು ಬೌದ್ಧ ಧರ್ಮ ಮತ್ತು ಸಂವಿಧಾನ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ರೈತರು, ಪ್ರಗತಿಪರ ಚಿಂತಕರು, ಕಾರ್ಮಿಕರು ಸೇರಿ ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSamaveshaConstitutionBuddhism


