ಟೆನಿಸ್: ಸಮರ್ಥ್, ಇನೆಯಾಗೆ ಕಿರೀಟ
ಬೆಂಗಳೂರಿನ ಹರ್ಷ ಲಿಂಗಪ್ಪ ಅಕಾಡೆಮಿಯಲ್ಲಿ ಶುಕ್ರವಾರ ಮುಕ್ತಾಯವಾದ ಎಐಟಿಎ 12 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಕನ್ನಡಿಗ ಸಮರ್ಥ್ ನಾರಾಯಣನ್ ಗೆದ್ದುಕೊಂಡರು. ಬಾಲಕಿಯರ ವಿಭಾಗದಲ್ಲಿ ತಮಿಳುನಾಡಿನ ತಮಿಳ್ ಇನೆಯಾ ಶ್ರೀಧರ್ ಚಾಂಪಿಯನ್ ಆದಳು. ನಗರದ ‘ಟೆನಿಸ್ ಇನ್ಫಿನಿಟಿ’ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಸಮರ್ಥ್ ಫೈನಲ್ನಲ್ಲಿ ಮಿಜೋರಾಂನ ಈಥನ್ ಲಾಲ್ಮುವಾನಾ ವಿರುದ್ಧ 6–3, 6–3ರಿಂದ ನೇರ ಸೆಟ್ಗಳಲ್ಲಿ ಜಯಿಸಿದರು. ಬಾಲಕರ ಡಬಲ್ಸ್ ಫೈನಲ್ನಲ್ಲಿ ಸಮರ್ಥ್– ಅಯಾನ್ಶ್ ಜಿ. ಜೋಡಿ 3–6, 6–7 (5–7) ರಿಂದ ಅಂಶು ಪ್ರಸನ್ನ ಮತ್ತು ವೈ.ಮಣಿಕಂಠ ಅವರಿಗೆ ಮಣಿಯಿತು. ಇನೆಯಾ ಪ್ರಶಸ್ತಿ ಸುತ್ತಿನಲ್ಲಿ ಕರ್ನಾಟಕದ ವಿಭಾ ವೆಂಕಟಾಚಲಂ ವಿರುದ್ಧ 6–2, 3–6, 7–6 (10–7)ರಿಂದ ಗೆದ್ದಳು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsTennis


