BLR Today
ಮಂಗಳವಾರ, ಸೆಪ್ಟೆಂಬರ್ 22, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru31 ನಿಮಿಷಗಳ ಹಿಂದೆ

ಬೆಂಗಳೂರಿನಲ್ಲಿ ಅಕ್ಕಿ ಬೆಲೆ ಮತ್ತೊಮ್ಮೆ ಏರಿಕೆ, ಗ್ರಾಹಕರಲ್ಲಿ ಆತಂಕ

ಬೆಂಗಳೂರಿನಲ್ಲಿ ಅಕ್ಕಿ ಬೆಲೆ ಮತ್ತೊಮ್ಮೆ ಏರಿಕೆ, ಗ್ರಾಹಕರಲ್ಲಿ ಆತಂಕ
ಚಿತ್ರ: Prajavani

ದಿನನಿತ್ಯದ ಆಹಾರವಾದ ಅನ್ನಕ್ಕೆ ಅವಿಭಾಜ್ಯವಾಗಿರುವ ಅಕ್ಕಿಯ ಬೆಲೆ ಮತ್ತೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಭಾರಿ ಹೊರೆ ಬಿದ್ದಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ವಿವಿಧ ಬಗೆಯ ಅಕ್ಕಿಯ ಸಗಟು ಬೆಲೆ ಕೆಜಿಗೆ ಸುಮಾರು ₹10ರಷ್ಟು ಏರಿಕೆಯಾಗಿದ್ದರೆ, ಇದೀಗ ಮತ್ತೊಮ್ಮೆ ₹5ರಿಂದ ₹7ರಷ್ಟು ಹೆಚ್ಚಳವಾಗಿದೆ. ಚಿಲ್ಲರೆ ಅಂಗಡಿಯವರ ಸಾಗಣೆ ವೆಚ್ಚ ಹಾಗೂ ವ್ಯಾಪಾರಿಗಳ ಲಾಭಾಂಶ ಸೇರಿ ಚಿಲ್ಲರೆ ಮಾರುಕಟ್ಟೆಯಲ್ಲಿ ಒಟ್ಟಾರೆ ಕೆಜಿಗೆ ₹20ರಿಂದ ₹22 ರಷ್ಟು ಹೆಚ್ಚಳದ ಪರಿಣಾಮ ಗ್ರಾಹಕರು ತತ್ತರಿಸುವಂತಾಗಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruRice PriceInflationConsumer Distress