BLR Today
ಸೋಮವಾರ, ಅಕ್ಟೋಬರ್ 26, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru2 ಗಂಟೆಗಳ ಹಿಂದೆ

ರೇನ್‌ಬೋ ಹಾಕಿ ಕ್ಲಬ್‌ಗೆ ಸುಲಭ ಜಯ

ರೇನ್‌ಬೋ ಹಾಕಿ ಕ್ಲಬ್‌ಗೆ ಸುಲಭ ಜಯ
ಚಿತ್ರ: Prajavani

ರೇನ್‌ಬೋ ಹಾಕಿ ಕ್ಲಬ್‌ ತಂಡವು ಡಿ.ಎಸ್‌.ಮೂರ್ತಿ ಸ್ಮರಣಾರ್ಥ ಹಾಕಿ ಟೂರ್ನಿಯ ಪಂದ್ಯದಲ್ಲಿ ಭಾನುವಾರ 8–0ಯಿಂದ ಹೊಯ್ಸಳ ಹಾಕಿ ಕ್ಲಬ್‌ ತಂಡವನ್ನು ಸುಲಭವಾಗಿ ಮಣಿಸಿತು. ಡಿಯೊನ್‌ ಬೆಳ್ಳಿಯಪ್ಪ ಅವರು 10ನೇ, 13ನೇ ಮತ್ತು 50ನೇ ನಿಮಿಷದಲ್ಲಿ ಗೋಲು ಹೊಡೆದರು. ಗಣಪತಿ ಬಿ.ಜೆ. (35ನೇ ಮತ್ತು 42ನೇ ನಿ.) ಅವಳಿ ಗೋಲು ಗಳಿಸಿದರೆ, ಅಚ್ಚಯ್ಯ ಎಂ.ಎಂ. (15ನೇ ನಿ.), ಸಿದ್ಧಾಂತ್‌ ಉತ್ತಪ್ಪ (25ನೇ ನಿ.) ಹಾಗೂ ರಕ್ಷಿತ್‌ (39ನೇ ನಿ.) ತಲಾ ಒಂದು ಗೋಲು ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಲಿಯೊಸ್‌ ಸ್ಪೋರ್ಟ್ಸ್‌ ಕ್ಲಬ್‌ ಮತ್ತು ಹಿಂದೂಸ್ತಾನ ಫ್ರೆಂಡ್ಸ್‌ ತಂಡಗಳು 2–2ರ ಡ್ರಾ ಸಾಧಿಸಿದವು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsHockey