BLR Today
ಶನಿವಾರ, ನವೆಂಬರ್ 7, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ರಾಗಿ ತಳಿ ಅಭಿವೃದ್ಧಿಗೆ ಲಕ್ಷ್ಮಣಯ್ಯ ಕೊಡುಗೆ ಅಪಾರ

ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ರಮೇಶ್ ಬಿ. ಅವರು, ಭಾರತದ ರಾಗಿ ತಳಿಗಳನ್ನು ಆಫ್ರಿಕಾದ ರಾಗಿ ತಳಿಗಳೊಂದಿಗೆ ಕಸಿ ಮಾಡಿ, ಅಧಿಕ ಇಳುವರಿ ನೀಡುವ ಹಲವು ತಳಿಗಳನ್ನು ಸಿ.ಎಚ್. ಲಕ್ಷ್ಮಣಯ್ಯ (ರಾಗಿ ಲಕ್ಷ್ಮಣಯ್ಯ) ಅಭಿವೃದ್ಧಿಪಡಿಸುವ ಮೂಲಕ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗವು ಗುರುವಾರ ಆಯೋಜಿಸಿದ್ದ ‘ಜನತಾ ವಿಜ್ಞಾನಿ ರಾಗಿ ಲಕ್ಷ್ಮಣಯ್ಯನವರ ಕೊಡುಗೆ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರ ಜೀವನಾಧಾರ ಬೆಳೆಯಾದ ರಾಗಿ ಧಾನ್ಯದ ಇಳುವರಿ ಹೆಚ್ಚಿಸಲು ಅವರು ಕೊಡುಗೆ ನೀಡಿದ್ದರು ಎಂದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationAgriculture