BLR Today
ಶನಿವಾರ, ನವೆಂಬರ್ 7, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru29 ನಿಮಿಷಗಳ ಹಿಂದೆ

ಆರೋಪಿ ಒಂಬತ್ತು ಜನರನ್ನು ಕೊಲ್ಲಲು ಯೋಚಿಸಿದ್ದ ಬಗ್ಗೆ ಪೊಲೀಸರ ವಿಚಾರಣೆಯಲ್ಲಿ ಮಾಹಿತಿ

ಆರೋಪಿ ಒಂಬತ್ತು ಜನರನ್ನು ಕೊಲ್ಲಲು ಯೋಚಿಸಿದ್ದ ಬಗ್ಗೆ ಪೊಲೀಸರ ವಿಚಾರಣೆಯಲ್ಲಿ ಮಾಹಿತಿ
ಚಿತ್ರ: Public TV

ಒಂದೇ ಕುಟುಂಬದ 7 ಮಂದಿಯ ನರಮೇಧ ಪ್ರಕರಣದಲ್ಲಿ ಆರೋಪಿ ಕೊಲೆಗಾಗಿ ನಡೆಸಿದ ಸಂಚು ಒಂದಾಗಿಯೋ ಹೊರಬೀಳುತ್ತಿದೆ. ಹಂತಕ ಅಸಲಿಗೆ ಏಳಲ್ಲ, ಒಂಬತ್ತು ಮಂದಿಯನ್ನು ಕೊಲೆ ಮಾಡುವ ಯೋಚನೆಯಲ್ಲಿದ್ದ ಹಾಗೂ ಕನ್ನಡದಲ್ಲಿ ಮಸೇಜ್ ಮಾಡಿದ್ದೇ ಅವನಿಗೆ ಮುಳುವಾಯ್ತು ಎಂದು ಪೊಲೀಸರ ವಿಚಾರಣೆ ರೋಚಕ ಅಂಶಗಳು ಹೊರಬಿದ್ದಿವೆ. ಅ.16ರಿಂದ ಒಂದೊಂದಾಗಿಯೇ ಕೊಲೆ ಮಾಡಿರುವ ಆರೋಪಿ ಬರೋಬ್ಬರಿ 15 ದಿನದಲ್ಲಿ 7 ಜನರನ್ನು ಹತ್ಯೆಗೈದಿದ್ದಾನೆ. ಕೂಡಲೇ ಶ್ರೀರಾಮಪುರ (Shrirampura) ಠಾಣೆಗೆ ನ.2ರಂದು ತಮ್ಮ ಮಗಳು ನಳಿನಿ, ಆಳಿಯ ಶಂಕರ್ ಹಾಗೂ 11 ವರ್ಷದ ಮೊಮ್ಮಗ ನಾಪತ್ತೆಯಾಗಿದ್ದಾರೆ ಎಂದು ಮೃತಳ ನಳಿನಿ ತಾಯಿ ದೂರು ನೀಡಿದ್ದರು.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeMurderPolice Investigation