BLR Today
ಶುಕ್ರವಾರ, ಸೆಪ್ಟೆಂಬರ್ 25, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru6 ಗಂಟೆಗಳ ಹಿಂದೆ

ಎ.ಐ ನೆರವಿನಿಂದ ಖಿನ್ನತೆ ಮೌಲ್ಯಮಾಪನ: ನಿಮ್ಹಾನ್ಸ್ ಜತೆ ಐಐಟಿ ಖರಗ್‌ಪುರ ಒಡಂಬಡಿಕೆ

ಎ.ಐ ನೆರವಿನಿಂದ ಖಿನ್ನತೆ ಮೌಲ್ಯಮಾಪನ: ನಿಮ್ಹಾನ್ಸ್ ಜತೆ ಐಐಟಿ ಖರಗ್‌ಪುರ ಒಡಂಬಡಿಕೆ
ಚಿತ್ರ: Prajavani

ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ನೆರವಿನಿಂದ ಖಿನ್ನತೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಮುಂದಾಗಿದೆ. ಈ ಸಂಬಂಧ ಸಂಸ್ಥೆಯು ಯೋಜನೆಯನ್ನು ರೂಪಿಸಿದ್ದು, ನಗರದಲ್ಲಿ ಗುರುವಾರ ನಡೆದಕಾರ್ಯಕ್ರಮದಲ್ಲಿ ಐಐಟಿಖರಗ್‌ಪುರ ಹಾಗೂ ತೇಜ್‌ಪುರದ ಲೋಕೋಪ್ರಿಯಾ ಗೋಪಿನಾಥ್ ಬೋರ್ಡೊಲೊಯ್ ಪ್ರಾದೇಶಿಕ ಮಾನಸಿಕ ಆರೋಗ್ಯ ಸಂಸ್ಥೆ (ಎಲ್‌ಜಿಬಿಆರ್‌ಐಎಂಎಚ್) ಜತೆಗೆ ನಿಮ್ಹಾನ್ಸ್ ಒಡಂಬಡಿಕೆ ಮಾಡಿಕೊಂಡಿತು. ಈ ಯೋಜನೆಯಡಿ ನಿಮ್ಹಾನ್ಸ್ ಮತ್ತು ಎಲ್‌ಜಿಬಿಆರ್‌ಐಎಂಎಚ್ ಸಂಸ್ಥೆಗಳಲ್ಲಿ 24 ತಿಂಗಳು ಅಧ್ಯಯನ ನಡೆಯಲಿದ್ದು, 4,500 ಕ್ಲಿನಿಕಲ್ ಸಂದರ್ಶನಗಳನ್ನು ನಡೆಸಿ ವಿಶ್ಲೇಷಿಸಲಾಗುತ್ತದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
AIMental HealthNIMHANSIIT KharagpurBengaluru