BLR Today
ಮಂಗಳವಾರ, ನವೆಂಬರ್ 10, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru15 ನಿಮಿಷಗಳ ಹಿಂದೆ

ದೀಪಾವಳಿ ಪಟಾಕಿ ಅಬ್ಬರಕ್ಕೆ ಬೆಂಗಳೂರಿನ ವಾಯುಮಾಲಿನ್ಯ ಶೇ.25ರಷ್ಟು ಹೆಚ್ಚಳ; AQI 82 ರಿಂದ 102ಕ್ಕೆ ಏರಿಕೆ

ದೀಪಾವಳಿ ಪಟಾಕಿ ಅಬ್ಬರಕ್ಕೆ ಬೆಂಗಳೂರಿನ ವಾಯುಮಾಲಿನ್ಯ ಶೇ.25ರಷ್ಟು ಹೆಚ್ಚಳ; AQI 82 ರಿಂದ 102ಕ್ಕೆ ಏರಿಕೆ
ಚಿತ್ರ: Vijaya Karnataka

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿಗಳ ಬಳಕೆಗೆ ಕೇವಲ 2 ಗಂಟೆಗಳ ಕಾಲಾವಕಾಶ ನೀಡಿದ್ದರೂ ಸಹ ಬೆಂಗಳೂರಿನ ವಾಯುಮಾಲಿನ್ಯ ಶೇ.25ರಷ್ಟು ಹೆಚ್ಚಳವಾಗಿದೆ. ಪಟಕಿಗಳ ಅಬ್ಬರಕ್ಕೆ ಕೆಲವೇ ಗಂಟೆಗಳ ಅವಧಿಯಲ್ಲಿ ನಗರದ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದ್ದು, AQI ಮಟ್ಟವು 82 ರಿಂದ 102ಕ್ಕೆ ಏರಿಕೆಯಾಗಿದೆ. ಇತ್ತ, ಪಟಾಕಿಗಳ ಅಬ್ಬರಕ್ಕೆ ನಗರದಲ್ಲಿ ಹಲವಾರು ಜನ ಗಾಯಗೊಂಡಿದ್ದು, ಮಿಂಟೋ ಆಸ್ಪತ್ರೆ, ಶಂಕರ ನೇತ್ರಾಲಯ ಹಾಗೂ ನಾರಾಯಣ ನೇತ್ರಾಲಯಗಳಲ್ಲಿ ಪಟಾಕಿಯಿಂದ ಕಣ್ಣಿಗೆ ಗಾಯಮಾಡಿಕೊಂಡ ಹಲವರು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruDiwaliAir PollutionHealth