BLR Today
ಸೋಮವಾರ, ನವೆಂಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಸ್ಟ್ರಿಂಗ್ ಆಪರೇಷನ್: ನೋಟಿಸ್ ಬೆನ್ನಲ್ಲೇ ಸಿಸಿಬಿ ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?

ಸ್ಟ್ರಿಂಗ್ ಆಪರೇಷನ್: ನೋಟಿಸ್ ಬೆನ್ನಲ್ಲೇ ಸಿಸಿಬಿ ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ಚಿತ್ರ: TV9 Kannada

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಬೆನ್ನಲ್ಲೇ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಕೃಪಾ ಆಳ್ವಾ ಹಾಜರಾಗಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ‘ಮೊದಲು ಕಾರ್ಯವಿಧಾನ ಮುಗಿಯಲಿ. ಆನಂತರ ಮಾತನಾಡುತ್ತೇನೆ’ ಎಂದು ಹೇಳಿದ್ದಾರೆ. ಕೃಪಾ ಆಳ್ವಾ ಪರ ವಕೀಲೆ ನಿಖಿತಾ ಪ್ರತಿಕ್ರಿಯಿಸಿ, ‘ಪ್ರಕರಣ ಸಂಬಂಧ ಈಗಾಗಲೇ ಕೃಪಾ ಆಳ್ವಾ ಹೇಳಿಕೆ ದಾಖಲಿಸಿದ್ದಾರೆ. ಈಗ ಮತ್ತೊಮ್ಮೆ ವಿಚಾರಣೆಗೆ ಬರಲು ಹೇಳಿದ್ದಕ್ಕೆ ಅಧಿಕೃತವಾಗಿ ಹೇಳಿಕೆ ಕೊಡಲು ಬಂದಿದ್ದಾರೆ. ಈಗಾಗಲೇ ಡಿಸಿಪಿ ಎದುರು ಎರಡು ಸಾರಿ ಹೇಳಿಕೆ ನೀಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCCBSiddaramaiahKrupa AlvaLegal