ಐ–ಲೀಗ್ 3 ಫುಟ್‌ಬಾಲ್ ಟೂರ್ನಿ: ಪ್ಲೇಆಫ್‌ಗೆ ಕಿಕ್‌ಸ್ಟಾರ್ಟ್ ಎಫ್‌ಸಿ ಲಗ್ಗೆ
ಎನ್.ರಾಕೇಶ್‌ಸಿಂಗ್ ಅವರು ಗಳಿಸಿದ ಅವಳಿ ಗೋಲುಗಳ ಬಲದಿಂದ ಕಿಕ್‌ಸ್ಟಾರ್ಟ್ ಎಫ್‌ಸಿ ತಂಡವು ಐ–ಲೀಗ್ 3 ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ 2–1ರಿಂದ ಝಿಂಕ್ ಫುಟ್‌ಬಾಲ್ ಅಕಾಡೆಮಿ ತಂಡವನ್ನು ಸೋಲಿಸಿತು. ಈ ಮೂಲಕ, ಡಿ ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆಯಿತು. ರೌಂಡ್‌ರಾಬಿನ್ ಮಾದರಿಯಲ್ಲಿ ನಡೆಯುವ ಪ್ಲೇಆಫ್ ಸುತ್ತಿಗೆ ಆರು ತಂಡಗಳು ಪ್ರವೇಶಿಸಿದ್ದು, ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ‘ಐ– ಲೀಗ್ 2’ ಟೂರ್ನಿಗೆ ಬಡ್ತಿ ಪಡೆಯಲಿವೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsFootball


