ಜೆಎಸ್ಎಸ್ ಪ್ರಕಟಣೆಗಳಿಗೆ ಶೇ 50 ರಿಯಾಯಿತಿ ಮಾರಾಟ
ಜೆಎಸ್ಎಸ್ ಗ್ರಂಥಮಾಲೆಯ ಎಲ್ಲಾ ಪ್ರಕಟಣೆಗಳಿಗೆ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಾದ್ಯಂತ ಶೇ 50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣೆ ವಿಭಾಗದ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಜೆಎಸ್ಎಸ್ ಬುಕ್ ಹೌಸ್, ಸುತ್ತೂರು ಶಾಖಾ ಮಠದಲ್ಲಿರುವ ಪುಸ್ತಕ ಮಳಿಗೆ, ನಂಜನಗೂಡು ತಾಲ್ಲೂಕು ಸುತ್ತೂರು ಶ್ರೀಕ್ಷೇತ್ರದ ಶ್ರೀಮಠ ಹಾಗೂ ಕರ್ತೃಗದ್ದುಗೆ, ಬೆಂಗಳೂರಿನ ಜಯನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಳಿಗೆ ಮತ್ತು ಜೆಎಸ್ಎಸ್ ಸಂಚಾರಿ ಪುಸ್ತಕ ಮಾರಾಟ ವಾಹನದಲ್ಲಿ ಪುಸ್ತಕಗಳನ್ನು ಕೊಳ್ಳಬಹುದಾಗಿದೆ. ಮಾಹಿತಿಗೆ ಮೊ.ಸಂ. 99009 53152 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
JSSJayanagarBook DiscountState Festival


