BLR Today
ಬುಧವಾರ, ಸೆಪ್ಟೆಂಬರ್ 23, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಉಪ್ಪಿನ ಬಳಕೆಗೆ ಬ್ರೇಕ್ ಹಾಕಲು ಹೆಲ್ತ್ ಡಿಪಾರ್ಟ್‌ಮೆಂಟ್ ಪ್ಲಾನ್: ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪು ತಿಂದ್ರೆ ಹಾರ್ಟ್ ಅಟ್ಯಾಕ್ ಅಪಾಯ

ಉಪ್ಪಿನ ಬಳಕೆಗೆ ಬ್ರೇಕ್ ಹಾಕಲು ಹೆಲ್ತ್ ಡಿಪಾರ್ಟ್‌ಮೆಂಟ್ ಪ್ಲಾನ್: ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪು ತಿಂದ್ರೆ ಹಾರ್ಟ್ ಅಟ್ಯಾಕ್ ಅಪಾಯ
ಚಿತ್ರ: TV9 Kannada

ಹೆಚ್ಚಿನ ಉಪ್ಪಿನ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಉಪ್ಪಿನ ಪ್ಯಾಕೆಟ್‌ಗಳ ಮೇಲೆ 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಎಚ್ಚರಿಕೆ ಲೇಬಲ್ ಕಡ್ಡಾಯಗೊಳಿಸಲು ಹೆಲ್ತ್ ಡಿಪಾರ್ಟ್‌ಮೆಂಟ್ ಮುಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಪ್ರಕಾರ, ಒಬ್ಬ ವ್ಯಕ್ತಿ ಪ್ರತಿದಿನ ಕೇವಲ 5 ಗ್ರಾಂ ಉಪ್ಪನ್ನು ಸೇವಿಸಬೇಕು. ಅತಿಯಾದ ಉಪ್ಪಿನ ಸೇವನೆಯು ಹೃದಯಾಘಾತ, ರಕ್ತನಾಳಗಳ ಸಮಸ್ಯೆ, ಕಿಡ್ನಿ ವೈಫಲ್ಯ, ಸ್ಥೂಲಕಾಯ ಮತ್ತು ಪಾರ್ಶ್ವವಾಯು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
HealthBengaluruSalt RegulationHealth Advisory