ಬೆಂಗಳೂರಿನ ಇಂಡಿಯನ್ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಅಕಾಡೆಮಿಯಿಂದ ವಿವಿಧ ಸರ್ಕಾರಿ ಉದ್ಯೋಗಗಳಿಗೆ ಉಚಿತ ಆನ್‌ಲೈನ್ ತರಬೇತಿ
ಬೆಂಗಳೂರಿನ ಕೆ.ಆರ್ ಪುರಂನ ಇಂಡಿಯನ್ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಅಕಾಡೆಮಿಯಿಂದ ಕೆಎಎಸ್, ಪಿಎಸ್ಐ, ಪಿಡಿಒ, ಎಫ್‌ಡಿಎ, ಎಸ್‌ಡಿಎ, ಗ್ರೂಪ್ ‘ಸಿ’ ಹಾಗೂ ಗ್ರಾಮ ಲೆಕ್ಕಿಗ, ಕಾನ್‌ಸ್ಟೆಬಲ್ ಹುದ್ದೆಗಳ ಪರೀಕ್ಷೆಗಳಿಗೆ 6 ತಿಂಗಳು ಉಚಿತ ಆನ್‌ಲೈನ್ ತರಬೇತಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಆರ್. ಭಾಸ್ಕರ್ ರೆಡ್ಡಿ ತಿಳಿಸಿದರು. ರಾಜ್ಯ ಸರ್ಕಾರದಿಂದ 70ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಹಂತ ಹಂತವಾಗಿ ನೇಮಕಾತಿ ನಡೆಯುತ್ತಿದ್ದು, ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಈ ತರಬೇತಿಯನ್ನು ನೀಡಲಾಗುತ್ತಿದೆ. ಹೊಸ ತಂಡಕ್ಕೆ ತರಬೇತಿ ಸೆ.25ರಿಂದ ಆರಂಭವಾಗುತ್ತದೆ. ಆಸಕ್ತರು ಮಾಹಿತಿಗಾಗಿ 9902829811, 9108440145 ಸಂಪರ್ಕಿಸಬಹುದು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationCoachingKASIAS


