BLR Today
ಶನಿವಾರ, ನವೆಂಬರ್ 7, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

‘ವಿಶ್ವಸಂಸ್ಕೃತಿ ಮಹಾಯಾನ’ದ ನಾಲ್ಕನೇ ಸಂಪುಟ 11ರಂದು ಬಿಡುಗಡೆಯಾಗಲಿದೆ

‘ವಿಶ್ವಸಂಸ್ಕೃತಿ ಮಹಾಯಾನ’ದ ನಾಲ್ಕನೇ ಸಂಪುಟ 11ರಂದು ಬಿಡುಗಡೆಯಾಗಲಿದೆ
ಚಿತ್ರ: Prajavani

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ‘ವಿಶ್ವಸಂಸ್ಕೃತಿ ಮಹಾಯಾನ’ ಗದ್ಯ ಮಹಾಕಾವ್ಯದ ನಾಲ್ಕನೇ ಸಂಪುಟ ಇದೇ 11ರಂದು ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕೃತಿಯ ಬಗ್ಗೆ ವೀರಪ್ಪ ಮೊಯಿಲಿ ಮಾಹಿತಿ ನೀಡಿದರು. ‘ಸಪ್ನ ಬುಕ್ ಹೌಸ್ ಈ ಸಂಪುಟವನ್ನು ಪ್ರಕಟಿಸಲಿದ್ದು, ಕೃತಿಯು 632 ಪುಟಗಳನ್ನು ಹೊಂದಿದೆ. ಈ ಗದ್ಯ ಮಹಾಕಾವ್ಯ ಒಟ್ಟು ಏಳು ಸಂಪುಟಗಳನ್ನು ಒಳಗೊಂಡಿದೆ. 2024ರಲ್ಲಿ ಪ್ರಥಮ ಸಂಪುಟ ಹೊರತರಲಾಗಿತ್ತು. ಕಳೆದ ವರ್ಷ ಎರಡು ಸಂಪುಟಗಳು ಬಿಡುಗಡೆಯಾಗಿದ್ದವು. ನಾಲ್ಕನೇ ಸಂಪುಟ ಸಿದ್ಧಪಡಿಸಲು ಒಂದು ವರ್ಷ ಸಮಯ ಬೇಕಾಯಿತು. ಐದನೇ ಸಂಪುಟವೂ ಸಿದ್ಧವಾಗುತ್ತಿದ್ದು, 2027ರ ಜನವರಿಯಲ್ಲಿ ಬಿಡುಗಡೆಯಾಗಲಿದೆ’ ಎಂದು ಹೇಳಿದರು. ‘ನಾಲ್ಕನೇ ಸಂಪುಟ 14 ಅಧ್ಯಾಯಗಳನ್ನು ಒಳಗೊಂಡಿವೆ. ವಿಶ್ವಧರ್ಮಕ್ಕೆ ರಾಮಕೃಷ್ಣ ಪರಮಹಂಸರ ಕೊಡುಗೆ, ಸರ್ವ ಧರ್ಮ ಸಮನ್ವಯ, ಧರ್ಮದರ್ಶನದ ವಿಶ್ವರೂಪ, ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಹಿಂದೂ ಧರ್ಮ ಮೊದಲಾದ ಆಧ್ಯಾತ್ಮಿಕ ಬೆಳಕು ಪಸರಿಸಿದ ಬಗೆಯನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ. ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾದರೆ, ವಿಶ್ವದ ಸಂಸ್ಕೃತಿಯ ಪ್ರಾಥಮಿಕ ಪರಿಚಯ ಅಗತ್ಯ’ ಎಂದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Veerappa MoilyVishwasamskruti MahayanaBook ReleaseCulture