ಬೆಂಗಳೂರಿನ ಕಂಪನಿಯಿಂದ ₹5,000 ಕೋಟಿ ಅಕ್ರಮ ಕ್ರಿಪ್ಟೊ ವಹಿವಾಟು ಪತ್ತೆ
ಬೆಂಗಳೂರಿನ ಕಂಪನಿಯೊಂದು ಅಕ್ರಮವಾಗಿ ₹5,000 ಕೋಟಿಯಷ್ಟು ಕ್ರಿಪ್ಟೊಕರೆನ್ಸಿ ವಹಿವಾಟು ನಡೆಸಿರುವುದನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 'ಮಡ್‌ರೆಕ್ಸ್' ಮತ್ತು 'ಸೇಬರ್.ಮನಿ' ಎಂಬ ಕ್ರಿಪ್ಟೊಕರೆನ್ಸಿ ವಹಿವಾಟು ನಡೆಸುತ್ತಿದ್ದ ಆರ್‌ಪಿಎಫ್‌ಎಎಸ್ ಟೆಕ್ನಾಲಜೀಸ್ ಲಿಮಿಟೆಡ್ 2018ರಿಂದ ಇಂತಹ ವಹಿವಾಟು ನಡೆಸುತ್ತಿವೆ ಎಂಬುದನ್ನು ಇ.ಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಕಂಪನಿಯು ಕ್ರಿಪ್ಟೊ ವಹಿವಾಟು ನಡೆಸಲು ಆರ್‌ಬಿಐ ನಿಯಮದಂತೆ ನೋಂದಣಿ ಮಾಡಿಕೊಂಡಿಲ್ಲ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
EDCryptocurrencyBengaluruFinancial Fraud


