ಬೆಂಗಳೂರಿನ ಓಝೋನ್ ಅರ್ಬನಾ ಕಂಪನಿಯ ₹702.70 ಕೋಟಿ ಸ್ಥಿರಾಸ್ತಿ ಜಪ್ತಿ
ಗ್ರಾಹಕರಿಂದ ಸುಮಾರು 1,305 ಕೋಟಿ ರು. ಸಂಗ್ರಹಿಸಿ ಫ್ಲ್ಯಾಟ್ ಗಳನ್ನು ನೀಡದೆ ವಂಚಿಸಿದ ಪ್ರಕರಣದಲ್ಲಿ ಓಝೋನ್ ಅರ್ಬನಾ ಅನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ₹702.70 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯ (ಇ.ಡಿ.) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಅಡಿ ಓಝೋನ್ ಅರ್ಬನಾ ಕಂಪನಿ ಮತ್ತು ಇತರರಿಗೆ ಸೇರಿದ ಫ್ಲ್ಯಾಟ್ ಗಳು ಮತ್ತು ಜಮೀನುಗಳು ಸೇರಿವೆ. ಇದಕ್ಕೂ ಮುನ್ನ ಕಂಪನಿಯ ಪ್ರವರ್ತಕ ಎಸ್ .ವಾಸುದೇವನ್ ಹಾಗೂ ಅವರ ಕುಟುಂಬಕ್ಕೆ ಸೇರಿದ 423.37 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಇದರೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಒಟ್ಟು 1,126.07 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದಂತಾಗಿದೆ. ಎಡಿ ಇ.ಡಿ.ಯು. ತಿಳಿಸಿದೆ.
ಮೂಲ ವರದಿ: Asianet Suvarna News
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEDOzone UrbanaScamProperty Seizure


