ಸಿಎಂ ಅವರ ಸದಾಶಿವನಗರ ಮನೆ ಮತ್ತು ವಿಧಾನಸೌಧಕ್ಕೆ ಬಾಂಬ್ ಬೆದರಿಕೆ; ಆರೋಪಿ ಬಂಧನ
ಸಿಎಂ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಮನೆ ಮತ್ತು ವಿಧಾನಸೌಧದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. 'ನಮ್ಮ ಯಾತ್ರಿ' ಆ್ಯಪ್ ಮೂಲಕ ಆಟೋ ಬುಕ್ಕಿಂಗ್ ಮಾಡಿದ ಕಾರ್ತಿಕ್ ಎಂಬಾತ ಆಟೋ ಚಾಲಕನನನ್ನು ಸಿಎಂ ಡಿಕೆಶಿ ನಿವಾಸದ ಮುಂದಿನ ಬ್ಯಾರಿಕೇಡ್ ಬಳಿ ಬರಲು ಹೇಳಿದ್ದ. ನಿಗದಿತ ಸ್ಥಳಕ್ಕೆ ಬಂದ ಆಟೋ ಚಾಲಕ ಭಗವಂತರಾಯ, ಕಾರ್ತಿಕ್ಗೆ ಕರೆ ಮಾಡಿ ಸ್ಥಳಕ್ಕೆ ಬಂದಿರೋದು ತಿಳಿಸಿದ್ದಾರೆ. ಆಗ ಅಲ್ಲಿದ್ದ ಪೊಲೀಸರಿಗೆ ಫೋನ್ ಕೊಡು ಅಂತ ಕಾರ್ತಿಕ್ ಹೇಳಿದ್ದು, ಈ ವೇಳೆ ಸಿಎಂ ಮನೆ ಮತ್ತು ವಿಧಾನಸೌಧದಲ್ಲಿ ಬಾಂಬ್ ಇಟ್ಟಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ. ಸಿಎಂ ಬೆಂಗಾವಲು ಹೋಗುವಾಗ ಬ್ಲಾಸ್ಟ್ ಆಗುತ್ತೆ ಅಂತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಸದಾಶಿವನಗರ ಪೊಲೀಸರಿಂದ ಆರೋಪಿ ಕಾರ್ತಿಕ್ನನ್ನು ಬಂಧಿಸಲಾಗಿದೆ. ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಆರೋಪಿ ವರ್ತಿಸುತ್ತಿದ್ದು, ಈ ಹಿಂದೆಯೂ ಹಲವು ಬೆದರಿಕೆ ಕರೆ ಮಾಡಿದ್ದ ಎನ್ನಲಾಗಿದೆ.
ಮೂಲ ವರದಿ: TV9 Kannada
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
crimeBengaluruSadashivanagarVidhana SoudhaCM Dikku Shivakumar


