ಬಾಯ್ಫ್ರೆಂಡ್ ಜತೆ ಸೇರಿ ಪತಿ ಹತ್ಯೆ: ಹೃದಯಾಘಾತವೆಂದು ಬಿಂಬಿಸಿದ್ದ ಖತರ್ನಾಕ್ ಪತ್ನಿ, ಪ್ರಿಯಕರನ ಬಂಧನ!
ಬೆಂಗಳೂರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ, ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ 36 ವರ್ಷದ ಮಹಿಳೆ ಮತ್ತು ಆಕೆಯ ಬಾಯ್ ಫ್ರೆಂಡ್ ನನ್ನು ಬಂಧಿಸಿರುವುದಾಗಿ ಸೋಮವಾರ ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಮೃತನ ಪತ್ನಿ ಅನಿತಾ ಮತ್ತು ಆಕೆಯ ಸ್ನೇಹಿತ ಮಧುಸೂದನ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಆಂಧ್ರಪ್ರದೇಶದ ಒಂದೇ ಗ್ರಾಮದವರಾಗಿದ್ದು, ಪರಸ್ಪರ ಪರಿಚಯವಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲ ವರದಿ: Kannada Prabha
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeMurderPolice


