BLR Today
ಸೋಮವಾರ, ನವೆಂಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru30 ನಿಮಿಷಗಳ ಹಿಂದೆ

ಬೆಂಗಳೂರಿನ ಸರಣಿ ಕೊಲೆ ಪ್ರಕರಣ: ಏಳು ಮೃತದೇಹಗಳು ಪತ್ತೆ; ಆರೋಪಿ ಇಂದುಶೇಖರ್‌ನ ಮತ್ತಷ್ಟು ಸುಳಿವು ಬಯಲು

ಬೆಂಗಳೂರಿನ ಸರಣಿ ಕೊಲೆ ಪ್ರಕರಣ: ಏಳು ಮೃತದೇಹಗಳು ಪತ್ತೆ; ಆರೋಪಿ ಇಂದುಶೇಖರ್‌ನ ಮತ್ತಷ್ಟು ಸುಳಿವು ಬಯಲು
ಚಿತ್ರ: TV9 Kannada

ಬೆಂಗಳೂರನ್ನೇ ನಡುಗಿಸಿದ್ದ ಏಳು ಕೊಲೆಗಳ ಪ್ರಕರಣದಲ್ಲಿ, ಪೊಲೀಸರು ಕೊನೆಗೂ ಎಲ್ಲಾ ಏಳು ಮೃತದೇಹಗಳನ್ನ ಪತ್ತೆಹಚ್ಚಿದ್ದಾರೆ. ಇದರ ಬೆನ್ನಲ್ಲೇ ಆರೋಪಿ ಇಂದುಶೇಖರ್‌ನ, ಸಂಚಿನ ಮತ್ತಷ್ಟು ಸುಳಿವುಗಳು ಪೊಲೀಸರಿಗೆ ಸಿಕ್ಕಿವೆ. ಆರೋಪಿಯ ಚಲನವಲನಗಳನ್ನ ಪತ್ತೆಹಚ್ಚಲು ಪೊಲೀಸರು 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದಾರೆ. ಏಳು ಮೃತದೇಹಗಳು: ನಂದಿಬೆಟ್ಟದಲ್ಲಿ ಪುನೀತ್, ತಮಿಳುನಾಡಿನ ಏರ್ಕಾಡ್‌ನಲ್ಲಿ ಸುನೀತಾ, ರೂಪವತಿ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶಿವಕುಮಾರ್, ದಿವ್ಯಾ. ಇದೀಗ ಶಿರಾಡಿಘಾಟ್‌ನಲ್ಲಿ ಶಂಕರ್ ಮತ್ತು ನಳಿನಿ. ಹೀಗೆ ಬೇರೆ ಬೇರೆ ಕಡೆ ಎಸೆದಿದ್ದ ಏಳು ಮೃತದೇಹಗಳನ್ನ ಕೊನೆಗೂ ಪೊಲೀಸರು ಪತ್ತೆಹಚ್ಚಿದ್ದಾರೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
crimeBengalurumurderinvestigation