BLR Today
ಮಂಗಳವಾರ, ನವೆಂಬರ್ 3, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ರಾಜಕೀಯBengaluru3 ಗಂಟೆಗಳ ಹಿಂದೆ

ಭಿನ್ನಸ್ವರ ಬಿಡಿ: ಮಹದೇವಪ್ಪಗೆ ರಾಯರಡ್ಡಿ ಸಲಹೆ

ಭಿನ್ನಸ್ವರ ಬಿಡಿ: ಮಹದೇವಪ್ಪಗೆ ರಾಯರಡ್ಡಿ ಸಲಹೆ
ಚಿತ್ರ: Prajavani

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸುದ್ದಿಗಾರರೊಂದಿಗೆ ಮಾತನಾಡ ಅವರು, 'ಅಧಿಕಾರ ಶಾಶ್ವತವಲ್ಲ, ಆತ್ಮೀಯತೆ, ಸ್ನೇಹ ಹಾಗೂ ಪ್ರೀತಿ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರೊಂದಿಗೆ ಭಿನ್ನಾಭಿಪ್ರಾಯ ಬೆಳೆಸಿಕೊಳ್ಳದೆ ಹೊಂದಿಕೊಂಡು ಹೋಗುವಂತೆ ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪಗೆ ಮನವಿ ಮಾಡಿದ್ದೇನೆ' ಎಂದು ಹೇಳಿದರು. ಅವರು, 'ಮಹದೇವಪ್ಪ ಅವರು ಮೊದಲಿನಿಂದಲೂ ನನಗೆ ಆತ್ಮೀಯರು. ಅವರೊಂದಿಗೆ ಖುದ್ದಾಗಿ ಮಾತನಾಡಿದ್ದೇನೆ. ನನಗೂ ಅಧಿಕಾರ ಸಿಗದ ಸಂದರ್ಭಗಳಿದ್ದವು. ಆದರೂ ನಾನು ತಲೆಕೆಡಿಸಿಕೊಂಡಿರಲಿಲ್ಲ' ಎಂದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPoliticsBasavaraja RayaraddiH.C. MahadevapuraSiddaramaiah