BLR Today
ಶನಿವಾರ, ಅಕ್ಟೋಬರ್ 31, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಹೊಂಬುಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಹಸ್ತಾಂತರ

ಹೊಂಬುಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಹಸ್ತಾಂತರ
ಚಿತ್ರ: Prajavani

ನಾಗರಿಕರ ಅನುಕೂಲಕ್ಕಾಗಿ ಬೆಂಗಳೂರಿನ ಪ್ರಗತಿ ಆಟೊಮೇಷನ್ ಕೇಂದ್ರ ಹಾಗೂ ಪ್ರಗತಿ ಕೇರ್ ಟ್ರಸ್ಟ್ ವತಿಯಿಂದ ಸಮೀಪದ ಹೊಂಬುಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಒದಗಿಸಲಾಗಿದ್ದು, ಇದರ ಹಸ್ತಾಂತರ ಕಾರ್ಯಕ್ರಮಕ್ಕೆ ಹೊಂಬುಜ ಜೈನ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಶುಕ್ರವಾರ ಚಾಲನೆ ನೀಡಿದರು. ಆಂಬುಲೆನ್ಸ್‌‌ನಲ್ಲಿ ಅತ್ಯಾಧುನಿಕ ಗುಣಮಟ್ಟದ 11 ವಿಧದ ತುರ್ತು ಹಾಗೂ ಜೀವ ರಕ್ಷಕ ಆರೋಗ್ಯ ರಕ್ಷಕ ಉಪಕರಣಗಳನ್ನು ಅಳವಡಿಸಲಾಗಿದೆ. ₹ 33 ಲಕ್ಷ ವೆಚ್ಚದ ಸುಸಜ್ಜಿತ ಆಂಬುಲೆನ್ಸ್‌ ಸೌಲಭ್ಯವನ್ನು ಗ್ರಾಮೀಣ ಜನರು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕ ಆನಂದ ಹರಿಹರ ಹೇಳಿದರು. ಬೆಂಗಳೂರಿನ ಪ್ರಗತಿ ಆಟೊಮೇಷನ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅತುಲ್ ಎಸ್. ಬಾರಂಗಿ ಹಾಗೂ ಅವರ ಪತ್ನಿ ಆಂಬುಲೆನ್ಸ್‌ ಹಸ್ತಾಂತರಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHealthCommunity Initiative