BLR Today
ಶನಿವಾರ, ಅಕ್ಟೋಬರ್ 31, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಮೆಟ್ರೋದಲ್ಲಿ ಯುವತಿಯ ವಿಡಿಯೋ ಮಾಡಿದವನ ವಶಕ್ಕೆ ಪಡೆದ ಪೊಲೀಸರು; ಮೊಬೈಲ್‌ನಲ್ಲಿ ಏನಿತ್ತು?

ಮೆಟ್ರೋದಲ್ಲಿ ಯುವತಿಯ ವಿಡಿಯೋ ಮಾಡಿದವನ ವಶಕ್ಕೆ ಪಡೆದ ಪೊಲೀಸರು; ಮೊಬೈಲ್‌ನಲ್ಲಿ ಏನಿತ್ತು?
ಚಿತ್ರ: Asianet Suvarna News

ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಯುವತಿಯ ಅನುಮತಿ ಪಡೆಯದೆ ಆಕೆಯ ವಿಡಿಯೋ ಮಾಡಿದ್ದ ಪ್ರಕರಣದ ಸಂಬಂಧ ಯುವಕನನ್ನು ಕಾಡುಗೋಡಿ ಠಾಣೆ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜೆ.ಪಿ.ನಗರ ನಿವಾಸಿ ಕೆ.ಟಿ.ಸಂತೋಷ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸಂತೋಷ್ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ ಅವರ ಹೇಳಿಕೆ ಪಡೆಯಲಾಗಿದೆ. ಆದರೆ ಅವರ ಮೊಬೈಲ್ ವಶಕ್ಕೆ ಪಡೆದು, ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruNamma MetroKadugodi