BLR Today
ಶುಕ್ರವಾರ, ನವೆಂಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ರಾಜಕೀಯBengaluru1 ಗಂಟೆಗಳ ಹಿಂದೆ

ಶಿವಶಂಕರಪ್ಪ ಸಾಹುಕಾರ ಜಾಮೀನು ಅರ್ಜಿ: ಆದೇಶ ಕಾಯ್ದಿರಿಸಿದ ವಿಶೇಷ ನ್ಯಾಯಾಲಯ

ಶಿವಶಂಕರಪ್ಪ ಸಾಹುಕಾರ ಜಾಮೀನು ಅರ್ಜಿ: ಆದೇಶ ಕಾಯ್ದಿರಿಸಿದ ವಿಶೇಷ ನ್ಯಾಯಾಲಯ
ಚಿತ್ರ: Prajavani

ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿ ನ್ಯಾಯಾಂಗ ಬಂಧನದಲ್ಲಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರ ಜಾಮೀನು ಕೋರಿಕೆ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ವಿಶೇಷ ನ್ಯಾಯಾಲಯ ಆದೇಶ ಕಾಯ್ದಿರಿಸಿದೆ. ಇ.ಡಿ ವಿಶೇಷ ನ್ಯಾಯಾಲಯದ ಸೆಷನ್ಸ್‌ ನ್ಯಾಯಾಧೀಶ ಮಂಜುನಾಥ ಸಂಗ್ರೇಶಿ ಈ ಕುರಿತಾದ ಅರ್ಜಿಯನ್ನು ಪೂರ್ಣಗೊಳಿಸಿ, ಆದೇಶವನ್ನು ಇದೇ 11ರಂದು ಪ್ರಕಟಿಸುವುದಾಗಿ ತಿಳಿಸಿದರು. ಸಾಹುಕಾರ ಪರ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ಮತ್ತು ಇ.ಡಿ ಪರ ಮಧು ಎನ್‌.ರಾವ್ ಹಾಗೂ ಡಿ.ಎಂ.ಮಹೇಶ್ವರಿ ವಾದ–ಪ್ರತಿವಾದ ಮಂಡಿಸಿದ್ದಾರೆ. ‘ಪಶುವೈದ್ಯಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದ ಹಗರಣದಲ್ಲಿ ಒಬ್ಬ ಲಿಂಗಾಯತ ಮಹಿಳಾ ಅಭ್ಯರ್ಥಿಯ ನೇಮಕಾತಿಗಾಗಿ ಶಿವಶಂಕರಪ್ಪ ಸಾಹುಕಾರ ₹10 ಲಕ್ಷ ಪಡೆದಿದ್ದಾರೆ ಮತ್ತು ಮಧ್ಯವರ್ತಿ ದಯಾನಂದ ಹಾಗೂ ಸಾಹುಕಾರ ನಡುವೆ ಕೋಟ್ಯಂತರ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ’ ಎಂಬುದು ಇ.ಡಿ ಆರೋಪ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPMLAKPSCLegalPolitics