ನೆಟ್ಟಕಲ್ಲಪ್ಪ ಅಕ್ವಾಟಿಕ್ ಕೇಂದ್ರದಲ್ಲಿ 5ನೇ ಆವೃತ್ತಿಯ ಈಜು ಚಾಂಪಿಯನ್‌ಷಿಪ್
ಶನಿವಾರ ಮತ್ತು ಭಾನುವಾರ ಪದ್ಮನಾಭ ನಗರದಲ್ಲಿರುವ ನೆಟ್ಟಕಲ್ಲಪ್ಪ ಅಕ್ವಾಟಿಕ್ ಕೇಂದ್ರದಲ್ಲಿ ಐದನೇ ಆವೃತ್ತಿಯ 'ಸ್ಕಿನ್ಸ್' ಈಜು ಚಾಂಪಿಯನ್‌ಷಿಪ್ ನಡೆಯಲಿದೆ. ಈ ಕೂಟದಲ್ಲಿ ಸ್ಕಿನ್ಸ್, ಶಾರ್ಟ್ ಕೋರ್ಸ್ ಮತ್ತು ಲಾಂಗ್ ಕೋರ್ಸ್ ಈಜು ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಿಂದ ಒಟ್ಟು 350 ಈಜುಪಟುಗಳು ಸ್ಪರ್ಧಾಕೊಳಕ್ಕೆ ಇಳಿಯಲಿದ್ದಾರೆ. ಭಾರತೀಯ ಈಜು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಮೊನಾಲ್ ಚೋಕ್ಸಿ ಅವರು 31ರಂದು ಸಂಜೆ 4.30 ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsSwimmingNettakallappa Aquatic Centre


