BLR Today
ಗುರುವಾರ, ನವೆಂಬರ್ 5, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಶಿಕ್ಷಣBegur2 ಗಂಟೆಗಳ ಹಿಂದೆ

ಹೊಸಕೋಟೆ ಕಾಲೇಜು ವಿದ್ಯಾರ್ಥಿಗಳಿಗೆ ₹7 ಲಕ್ಷ ವಿದ್ಯಾರ್ಥಿವೇತನ

ಹೊಸಕೋಟೆ ಕಾಲೇಜು ವಿದ್ಯಾರ್ಥಿಗಳಿಗೆ ₹7 ಲಕ್ಷ ವಿದ್ಯಾರ್ಥಿವೇತನ
ಚಿತ್ರ: Prajavani

ಹೊಸಕೋಟೆ: ಸೀನಿಯರ್ಸ್ ಫಾರ್ ಚೇಂಜ್ ಸಂಸ್ಥೆಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 80 ಪ್ರತಿಭಾವಂತ ಪದವಿ ವಿದ್ಯಾರ್ಥಿಗಳಿಗೆ ₹7 ಲಕ್ಷ ವಿದ್ಯಾರ್ಥಿವೇತನ ನೀಡಲಾಯಿತು. ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವ ಕಾರ್ಯಕ್ರಮಕ್ಕೆ ಸಂಸ್ಥೆ ಅಧ್ಯಕ್ಷ ಅತುಲ್ ಸಿನ್ಹಾ ಚಾಲನೆ ನೀಡಿದರು. ಇದೆ ಸಂದರ್ಭದಲ್ಲಿ ಶೇ 80ಕ್ಕಿಂತ ಹೆಚ್ಚಿನ ಅಂಕಪಡೆದ 80 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರಾಂಶುಪಾಲ ರಾಮಲಿಂಗಪ್ಪ ಟಿ. ಬೇಗೂರು, ಸೀನಿಯರ್ಸ್ ಫಾರ್ ಚೇಂಜ್ ಸಂಸ್ಥೆ ಕಾರ್ಯದರ್ಶಿ ಪ್ರದೀಪ್ ಶ್ರೀವಾತ್ಸವ, ವಿದ್ಯಾರ್ಥಿ ವೇತನ ಸಂಚಾಲಕ ಕಾವಲ್ಲಯ್ಯ, ಅಧ್ಯಾಪಕ ರೂಪಾ, ವಿಶ್ವೇಶ್ವರಯ್ಯ, ಶಾರದಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationScholarship