BLR Today
ಗುರುವಾರ, ನವೆಂಬರ್ 5, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಶಿಕ್ಷಣBengaluru3 ಗಂಟೆಗಳ ಹಿಂದೆ

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ವೃತ್ತಿ ಬೆಳವಣಿಗೆಗೆ ನೆರವಾಗಲು ಸ್ಟಡಿಮೆಡಿಕ್ ನಾಲ್ಕು ಯೋಜನೆಗಳ ಘೋಷಣೆ

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ವೃತ್ತಿ ಬೆಳವಣಿಗೆಗೆ ನೆರವಾಗಲು ಸ್ಟಡಿಮೆಡಿಕ್ ನಾಲ್ಕು ಯೋಜನೆಗಳ ಘೋಷಣೆ
ಚಿತ್ರ: Prajavani

ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನ ಮತ್ತು ವೃತ್ತಿಪರ ಬೆಳವಣಿಗೆಗೆ ನೆರವಾಗಲು ಜಾಗತಿಕ ವೈದ್ಯಕೀಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ‘ಸ್ಟಡಿಮೆಡಿಕ್‌’ ನಾಲ್ಕು ಯೋಜನೆಗಳನ್ನು ರೂಪಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು. ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ಜಾಗತಿಕ ವೈದ್ಯಕೀಯ ವೃತ್ತಿ ಶೃಂಗ–2026 ಉದ್ಘಾಟಿಸಿ ಮಾತನಾಡಿದ ಅವರು, ‘ಎಂಬಿಬಿಎಸ್‌ ಅಧ್ಯಯನ, ಸ್ನಾತಕೋತ್ತರ ನೀಟ್‌, ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ ಹಾಗೂ ಜಾಗತಿಕ ವೈದ್ಯಕೀಯ ವೃತ್ತಿ ಅವಕಾಶ ಎಂಬ ನಾಲ್ಕು ಯೋಜನೆಗಳ ಪ‍್ರಯೋಜನ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಗಲಿದೆ’ ಎಂದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationMedical StudentsStudyMedic