BLR Today
ಸೋಮವಾರ, ಅಕ್ಟೋಬರ್ 5, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ರಾಜಕೀಯSadashivanagar3 ಗಂಟೆಗಳ ಹಿಂದೆ

ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ

ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ
ಚಿತ್ರ: TV9 Kannada

ಅಕ್ಟೋಬರ್ 05 ರಂದು ಸಿಎಂ ಡಿ.ಕೆ. ಶಿವಕುಮಾರ್ ಭೇಟಿಗಾಗಿ ಶಾಸಕ ಕೊತ್ತೂರು ಮಂಜುನಾಥ್ ಅವರು ಸದಾಶಿವನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ಸಾಕಷ್ಟು ಸಂಖ್ಯೆಯ ಬೆಂಬಲಿಗರು ಕೂಡ ಇದ್ದರು. ಆದರೆ, ನಿವಾಸದ ಹೊರಗಿದ್ದ ಪೊಲೀಸರು ಕೊತ್ತೂರು ಮಂಜುನಾಥ್ ಅವರನ್ನು ಮಾತ್ರ ಒಳಗೆ ಬಿಡಲು ಸಿದ್ಧರಾದರು. ಆದರೆ ಅವರ ಜೊತೆ ಬಂದಿದ್ದ ಬೆಂಬಲಿಗರನ್ನು ಒಳಗೆ ಬಿಡಲು ನಿರಾಕರಿಸಿದರು. ಪೊಲೀಸರ ಈ ನಡೆಗೆ ಶಾಸಕ ಕೊತ್ತೂರು ಮಂಜುನಾಥ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, 'ನಾನು ಬಂದರೂ ಬಿಡಬೇಕು, ನನ್ನ ಜೊತೆ ಹತ್ತು ಜನ ಬಂದರೂ ಬಿಡಬೇಕು, ನೂರು ಜನ ಬಂದರೂ ಕೂಡ ಒಳಗಡೆ ಬಿಡಬೇಕು' ಎಂದು ಖಾರವಾಗಿ ಹೇಳಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ನಾನು ಪೊಲೀಸರಿಗೆ ಗದರಿಲ್ಲ. ನನ್ ಜೊತೆ ಬಂದಿರೋರನ್ನ ಬಿಡಿ ಎಂದೆ. ನೂರು ಜನ ಎಂದು ಹೇಳಿಲ್ಲ. ಮೂರು ಜನ ಅಂದಿದ್ದು' ಎಂದು ಸ್ಪಷ್ಟನೆ ನೀಡಿದ್ದಾರೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSadashivanagarMLAPolitics