BLR Today
ಶನಿವಾರ, ಅಕ್ಟೋಬರ್ 17, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರRajarajeshwari Nagar1 ಗಂಟೆಗಳ ಹಿಂದೆ

ರಾಜರಾಜೇಶ್ವರಿನಗರದಲ್ಲಿ ಕಣ್ಣು ಹಾಯಿಸಿದಷ್ಟೂ ಕಸದ ರಾಶಿ, ಗಬ್ಬು ನಾರುವ ತ್ಯಾಜ್ಯ

ರಾಜರಾಜೇಶ್ವರಿನಗರದಲ್ಲಿ ಕಣ್ಣು ಹಾಯಿಸಿದಷ್ಟೂ ಕಸದ ರಾಶಿ, ಗಬ್ಬು ನಾರುವ ತ್ಯಾಜ್ಯ
ಚಿತ್ರ: Prajavani

ರಾಜರಾಜೇಶ್ವರಿನಗರದಲ್ಲಿ ಕಣ್ಣು ಹಾಯಿಸಿದಷ್ಟೂ ಕಸದ ರಾಶಿ, ಗಬ್ಬು ನಾರುವ ತ್ಯಾಜ್ಯ. ಸೊಣ್ಣೇನಹಳ್ಳಿ ಸಮೀಪದ ಶಿರಡಿ ಸಾಯಿಬಾಬಾ ದೇವಸ್ಥಾನ ಸುತ್ತಮುತ್ತಲಿನ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (ಬಿಡಿಎ) ಬಡಾವಣೆಯ ರಸ್ತೆಗಳಲ್ಲಿ ಹಸಿ, ಒಣಗಿದ ತ್ಯಾಜ್ಯ, ಆಸ್ಪತ್ರೆ, ಅಪಾರ್ಟ್‌ಮೆಂಟ್‌ ಹೋಟೆಲ್‌, ವಾಣಿಜ್ಯ ಮಳಿಗೆಗಳಿಂದ ತಂದು ಸುರಿದಿರುವ ತ್ಯಾಜ್ಯ ಕಣ್ಣಿಗೆ ರಾಚುತ್ತಿದೆ. ಕಸದ ರಾಶಿ, ಕೋಳಿ, ಮೇಕೆ ಕುರಿ ತ್ಯಾಜ್ಯ, ಕರುಳು, ಮೂಳೆಗಳನ್ನು ತಂದು ಸುರಿಯುವುದರಿಂದ ಕೊಳೆತ ಮಾಂಸ, ತ್ಯಾಜ್ಯವನ್ನು ತಿನ್ನಲು ನಾಯಿಗಳು ಗುಂಪಾಗಿ ಸೇರುತ್ತಿವೆ. ಕಸ ತಿನ್ನಲು ಬಿಡಾಡಿ ಹಸುಗಳು ಸೇರುತ್ತಿವೆ ಎಂದು ಸ್ಥಳೀಯರು ದೂರಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruWaste ManagementRajarajeshwari NagarBBMPEnvironmental Issues