ರಾಜಾಜಿನಗರದಲ್ಲಿ ಮಹಿಳಾ ಕಾಫಿ ಅಲಯನ್ಸ್ ಇಂಡಿಯಾ ಕಾಫಿ ಸಂತೆ
ಬೆಂಗಳೂರಿನ ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯ ಒರಾಯನ್ ಮಾಲ್‌ನಲ್ಲಿ ವಿಮೆನ್ಸ್ ಕಾಫಿ ಅಲಯನ್ಸ್ ಇಂಡಿಯಾ (ಡಬ್ಲ್ಯುಸಿಎಐ) ಇದೇ 26, 27ರಂದು ಕಾಫಿ ಸಂತೆ ಆಯೋಜಿಸಿದೆ. '8ನೇ ಆವೃತ್ತಿಯ ಸಂತೆಯು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ. ವಿವಿಧ ಕಾಫಿ ಉತ್ಪನ್ನಗಳ ಪ್ರದರ್ಶನ ಇರಲಿದ್ದು, ಸ್ವಾದವನ್ನು ಸವಿಯಬಹುದು' ಎಂದು ಸಂಸ್ಥೆಯ ಅಧ್ಯಕ್ಷೆ ಆರತಿ ಸೋಮಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಲಾ ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೆಫೆ ಕಂಪು ಸಂಸ್ಥೆಯ ಪುನೀತ್ ಪರಮೇಶ್, ಚಿತ್ರಶ್ರೀ, ಅಮೆರಿಕದ ಗಾರ್ಡನ್ ಸ್ಟ್ರೈಕ್, ಸ್ವಿಟ್ಜರ್ಲೆಂಡ್‌ನ ಗ್ಲೋರಿಯಾ ಪೆದ್ರೊಜಾ, ಲಂಡನ್‌ನ ಪ್ರಿನ್ಸಿಲ್ಲಾ ಡೇನಿಯಲ್, ದಕ್ಷಿಣ ಕೊರಿಯಾದ ಕಿಮ್ ಹೈಯಿನ್ ಸೇರಿದಂತೆ ಕಾಫಿ ತಜ್ಞರೊಂದಿಗೆ ಸಂವಾದ ಇರಲಿದೆ ಎಂದು ವಿವರಿಸಿದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruRajajinagarCoffeeEvent


