BLR Today
ಭಾನುವಾರ, ಅಕ್ಟೋಬರ್ 25, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರMalleshwaram3 ಗಂಟೆಗಳ ಹಿಂದೆ

ಕಡೂರು ಪಟ್ಟಣ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಆಗಸ್ಟ್ 25 ರಂದು ವಿದ್ಯುತ್ ವ್ಯತ್ಯಯ

ಕಡೂರು ಪಟ್ಟಣ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಆಗಸ್ಟ್ 25 ರಂದು ವಿದ್ಯುತ್ ವ್ಯತ್ಯಯ
ಚಿತ್ರ: Prajavani

ಮೆಸ್ಕಾಂ ಎಇಇ ಕಚೇರಿ ಪ್ರಕಟಣೆಯ ಪ್ರಕಾರ, ಕಡೂರು ಪಟ್ಟಣದ ವ್ಯಾಪ್ತಿಯಲ್ಲಿ ರಾ.ಹೆ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದಂತೆ ವಿದ್ಯುತ್ ಕಂಬ ಹಾಗೂ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯಿಂದಾಗಿ ಆಗಸ್ಟ್ 25 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹಳೇ ಬಸ್‌ಸ್ಟ್ಯಾಂಡ್, ಮಾತಾ ಲೇಔಟ್, ಕನಕ ವೃತ್ತ, ಮುದಿಯಪ್ಪ ಬಡಾವಣೆ, ರಾಜೀವ್‌ಗಾಂಧಿ ಬಡಾ ವಣೆ, ಮೂರ್ತಿಹಾಳ್, ಕೆ.ಎಂ. ರಸ್ತೆ, ಸುಭಾಷ್‌ನಗರ, ವೇದಾನಗರ, ಕೋಟೆ, ಸ್ವಣಾಂಬ ಕಾಲೊನಿ, ಕೆ. ಹೊಸಳ್ಳಿ, ನಜೀರ್ ಸಾಬ್‌ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಡಿಪೊ, ಈದ್ಗಾನಗರ, ತ್ಯಾಗರಾಜ ನಗರ, ಅಶ್ವಥ್‌ ನಗರ, ವೆಂಕಟೇಶ್ವರ ನಗರ, ಚೆಕ್‌ಪೋಸ್ಟ್, ದೊಡ್ಡಪೇಟೆ, ಹಳೇಪೇಟೆ, ಯು.ಬಿ. ರೋಡ್, ಉಳುಕಿನಕಲ್ಲು, ಮಲ್ಲೇಶ್ವರ ಸರ್ಕಲ್ ಪ್ರದೇಶಗಳು ಹಾಗೂ ಕಡೂರು ಗ್ರಾಮಾಂತರ ಶಾಖಾ ವ್ಯಾಪ್ತಿಯ ಮಲ್ಲೇಶ್ವರ, ಬಾಸೂರು ಹಾಗೂ ಕಾಮನಕೆರೆ ಗ್ರಾ.ಪಂ.ಗಳ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPower OutageKaduruMalleshwaram