ಕೊಡಿಗೇನಹಳ್ಳಿ ಮಲ್ಲೇಶ್ವರಸ್ವಾಮಿ ದೇಗುಲ ಜೀರ್ಣೋದ್ಧಾರ, ಕುಂಭಾಭಿಷೇಕ
ಕೊಡಿಗೇನಹಳ್ಳಿ ಮಲ್ಲೇಶ್ವರಸ್ವಾಮಿ ದೇವಾಲಯದ ನೂತನ ಸ್ಥಿರ ಬಿಂಬಗಳ ಪುನರ್ ಜೀರ್ಣೋದ್ಧಾರ ಹಾಗೂ ಕುಂಭಾಭಿಷೇಕ ಮಹೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡು ಜಮಾಯಿಸಿತ್ತು. ಎಂಟು ವರ್ಷಗಳಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿತ್ತು. ನೂತನವಾಗಿ ಶಿವಲಿಂಗ, ಪಾರ್ವತಿ, ನಂದಿ ಹಾಗೂ ಸೀತಾ, ರಾಮ, ಲಕ್ಷ್ಮಣ ಮತ್ತು ಆಂಜನೇಯಸ್ವಾಮಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಧಾನ ಅರ್ಚಕ ಎಂ.ಬಿ.ಸುಬ್ಬರಾಯಪ್ಪ ನೇತೃತ್ವದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ರುದ್ರ ಹೋಮ, ಮೃತುಂಜಯ ಹೋಮ, ಪೂರ್ಣಾಹುತಿ, ಸಹಸ್ರ ಕಳಶಾಭಿಷೇಕ, ಗೋಪೂಜೆ ನೆರವೇರಿದವು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
MalleshwaramKodigenahalliTempleFestival


