BLR Today
ಸೋಮವಾರ, ನವೆಂಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿMalleshwaramಸೆಪ್ಟೆಂಬರ್ 24, 2026

ಮಲ್ಲೇಶ್ವರಂನ ಸ್ಯಾಂಕಿ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆ ವ್ಯವಸ್ಥೆ

ಮಲ್ಲೇಶ್ವರಂನ ಸ್ಯಾಂಕಿ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆ ವ್ಯವಸ್ಥೆ
ಚಿತ್ರ: Vijaya Karnataka

ಗಣೇಶ ಹಬ್ಬದ ನಿಮಿತ್ತ ಮಲ್ಲೇಶ್ವರಂನ ಸ್ಯಾಂಕಿ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆ ವ್ಯವಸ್ಥೆ ಮಾಡಲಾಗಿದೆ. ಮಲ್ಲೇಶ್ವರಂ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ವಲಯಕ್ಕೆ ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಸ್ಯಾಂಕಿ ಕೆರೆಯಲ್ಲಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ದಿನಾಂಕ 14 ರಿಂದ 24ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗಿದೆ. ಸ್ಥಳದಲ್ಲಿ ಬ್ಯಾರಿಕೇಡ್‌ಗಳು, ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆ, ಆಂಬುಲೆನ್ಸ್‌ ಮತ್ತು ಒರ್ವ ವೈದ್ಯಾಧಿಕಾರಿಗಳ ವ್ಯವಸ್ಥೆ ಮಾಡಲಾಗಿದೆ. ಕಲ್ಯಾಣಿ ಸುತ್ತಮುತ್ತ ಭದ್ರತೆಗಾಗಿ ಸಿಸಿಟಿವಿ ಅಳವಡಿಕೆ ಮಾಡಿ 24 ಗಂಟೆಗಳ ಕಾಲ ನಿಗಾ ಇಡಲಾಗಿದೆ.

ಮೂಲ ವರದಿ: Vijaya Karnataka ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Ganesh VisarjanMalleshwaramSanchi LakeBengaluru