ದೀಪಾವಳಿ ಹಬ್ಬದ ಆಚರಣೆಗಾಗಿ ಕೆ.ಆರ್.ಪುರದಲ್ಲಿ ದಿನಸಿ ಕಿಟ್ ವಿತರಣೆ
ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಸುಬ್ಬಣ್ಣ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣೆ ಸಮಾರಂಭದಲ್ಲಿ ಪಾಲಿಕೆಯ ಮಾಜಿ ಸದಸ್ಯ ಉದಯ್ ಕುಮಾರ್ ಮಾತನಾಡಿದರು. ದಿನಗೂಲಿಗಳಾಗಿ ದುಡಿಯುವ ಜನ ವರ್ತೂರಿನ ಹಲವು ಭಾಗಗಳಲ್ಲಿ ವಾಸವಿದ್ದು, ಅವರಿಗೆ ಅನುಕೂಲವಾಗಲು ಪ್ರತಿ ವರ್ಷ ದೀಪಾವಳಿ, ಯುಗಾದಿ ಹಾಗೂ ರಂಜಾನ್ ವಿಶೇಷ ಸಂದರ್ಭಗಳಲ್ಲಿ ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಸುಬ್ಬಣ್ಣ ಮಾತನಾಡಿ, ಯಾವುದೇ ಜಾತಿ ಭೇದವಿಲ್ಲದೆ ಸರ್ವ ಜನಾಂಗದವರಿಗೂ ದಿನಸಿ ಕಿಟ್ ನೀಡುತ್ತಾ ಬರುತ್ತಿದ್ದೇನೆ. ಈ ವರ್ಷ ಒಂದು ಸಾವಿರಕ್ಕೂ ಅಧಿಕ ಜನರಿಗೆ ದಿನಸಿ ಕಿಟ್ ವಿತರಿಸಲಾಗಿದೆ ಎಂದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruMahadevapuraVarthurDiwaliFestival


