BLR Today
ಭಾನುವಾರ, ಸೆಪ್ಟೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರKengeri2 ಗಂಟೆಗಳ ಹಿಂದೆ

ಕೆಂಗೇರಿ ಪಾದಚಾರಿ ಮಾರ್ಗ ಕಾಮಗಾರಿಯಿಂದ ಮರಗಳಿಗೆ ಸಂಚಕಾರ

ಕೆಂಗೇರಿ ಪಾದಚಾರಿ ಮಾರ್ಗ ಕಾಮಗಾರಿಯಿಂದ ಮರಗಳಿಗೆ ಸಂಚಕಾರ
ಚಿತ್ರ: Prajavani

ಕೆಂಗೇರಿ ಉಪನಗರ ಪಾರ್ಕ್ ರಸ್ತೆಯ ಸುತ್ತಮುತ್ತ ಪಾದಚಾರಿ ಮಾರ್ಗ ನವೀಕರಣ ಕಾಮಗಾರಿಯಿಂದ ನೂರಾರು ಮರಗಳು ಧರೆಗುರುಳುವ ಆತಂಕ ಎದುರಾಗಿದೆ. ಪಾರ್ಕ್ ರಸ್ತೆಯ 3 ಮತ್ತು 4ನೇ ಮುಖ್ಯರಸ್ತೆಗಳಲ್ಲಿ ಪಾದಚಾರಿ ಮಾರ್ಗದ ಕಾಂಕ್ರೀಟ್‌ ಬ್ಲಾಕ್‌ಗಳನ್ನು ತೆಗೆದು ಮರು ಜೋಡಿಸುವ ಕಾರ್ಯ ಚಾಲ್ತಿಯಲ್ಲಿದೆ. ಈ ವೇಳೆ ಮರದ ಬುಡದ ಸುತ್ತಲೂ ಪ್ಲಾಸ್ಟಿಂಗ್ ಬಳಿಯಲಾಗಿದೆ. ನೀರು ಸಿಗದೆ ಹತ್ತಾರು ಮರಗಳು ಒಣಗಿ ಧರಾಶಾಹಿಯಾಗಲಿದೆ ಎಂದು ಸ್ಥಳೀಯ ವಾಯು ವಿಹಾರಿ ವಿನೋದ್ ಆತಂಕ ವ್ಯಕ್ತಪಡಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KengeriGBASidewalk RenovationTree Damage