BLR Today
ಮಂಗಳವಾರ, ಅಕ್ಟೋಬರ್ 20, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿJP Nagar3 ಗಂಟೆಗಳ ಹಿಂದೆ

ಜೆಪಿ ನಗರದ ಶ್ರೀದೇವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ, ಗಂಗೆಸ್ಥಳ ಮೆರವಣಿಗೆ

ಜೆಪಿ ನಗರದ ಶ್ರೀದೇವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ, ಗಂಗೆಸ್ಥಳ ಮೆರವಣಿಗೆ
ಚಿತ್ರ: Prajavani

ಕಾರಟಗಿಯ ಜೆಪಿ ನಗರದ ಶ್ರೀದೇವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದುರ್ಗಾಷ್ಟಮಿ ನಿಮಿತ್ತ ಸೋಮವಾರ ಗಂಗೆಸ್ಥಳಕ್ಕೆ ಅದ್ದೂರಿ ಮೆರವಣಿಗೆ ಸಡಗರದೊಂದಿಗೆ ನಡೆಯಿತು. ವೀರಭದ್ರೇಶ್ವರ ದೇವಾಲಯದಲ್ಲಿ ಗಂಗಾಪೂಜೆ ನೆರವೇರಿಸಿದ ಬಳಿಕ ಮೆರವಣಿಗೆ ಆರಂಭಗೊಂಡಿತು. ಪೂರ್ಣಕುಂಭ, ಕಳಸ ಹೊತ್ತ ಮಹಿಳೆಯರು, ಡೊಳ್ಳು, ಝಾಂಜ್‌ಮೇಳದಂತಹ ವಾದ್ಯಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದವು. ಮೆರವಣಿಗೆಯು ಹಳೆಯ ನಾಡಕಚೇರಿ ರಸ್ತೆ, ಡಾ. ರಾಜ್‌ ಕಲಾಮಂದಿರ, ರಾಜ್ಯ ಹೆದ್ದಾರಿ, ಕನಕದಾಸ ವೃತ್ತ, ನವಲಿ ರಸ್ತೆ ಮಾರ್ಗವಾಗಿ ದೇವಾಲಯ ತಲುಪಿತು. ಮಧ್ಯಾಹ್ನ ಸಾಮೂಹಿಕ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruJP NagarFestivalReligion