BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿJP Nagar4 ದಿನಗಳ ಹಿಂದೆ

ಅಮೀನಗಡದಲ್ಲಿ ಗಣವೇಷಧಾರಿಗಳ ಪಥ ಸಂಚಲನ ಗಮನ ಸೆಳೆಯಿತು

ಅಮೀನಗಡದಲ್ಲಿ ಗಣವೇಷಧಾರಿಗಳ ಪಥ ಸಂಚಲನ ಗಮನ ಸೆಳೆಯಿತು
ಚಿತ್ರ: Prajavani

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಅಮೀನಗಡದ ಸಮೀಪದ ಗುಡೂರ (ಎಸ್‍ಸಿ) ಗ್ರಾಮದಲ್ಲಿ ಗಣವೇಷಧಾರಿಗಳ ಪಥ ಸಂಚಲನ ಗಮನ ಸೆಳೆಯಿತು. ಶನಿವಾರ ನಡೆದ ಈ ಪಥ ಸಂಚಲನಕ್ಕೆ ಜನತೆ ಹೂಮಳೆ ಸುರಿದು ಸ್ವಾಗತ ಕೋರಿದರು. ಸಂಜೆ 4 ಗಂಟೆಗೆ ಗ್ರಾಮದ ಜೆಪಿ ನಗರದ ಕೆಂಚಮ್ಮದೇವಿ ದೇವಸ್ಥಾನದಿಂದ ಹೊರಟ ಗಣವೇಷಧಾರಿಗಳ ಪಥ ಸಂಚಲನ ಅಮೀನಗಡ ರಸ್ತೆ, ಹಳೆಯ ಬಸ್ ನಿಲ್ದಾಣ, ಸಂಗಮೇಶ್ವರ ಪ್ರಿಂಟರ್ಸ್, ಬಾದಾಮಿ ಕ್ರಾಸ್, ಹುನಗುಂದ ಕ್ರಾಸ್ ಮೂಲಕ ಐಟಿಐ ಕಾಲೇಜ್ ಹತ್ತಿರದ ಶ್ರೀರಾಮ ಬೃಂದಾವನ ತಲುಪಿತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruJP NagarAminegadaProcessionCulture