ಸಮರ್ಥನಂನ 20ನೇ ಓಪನ್‌ಟೆಕ್ಸ್ಟ್ ಪ್ರೆಸೆಂಟ್ಸ್ ಬೆಂಗಳೂರು ವಾಕಥಾನ್ ನವೆಂಬರ್ 28ರಂದು
ಸಮರ್ಥನಂ ವಿಶೇಷಚೇತನರ ಸಂಸ್ಥೆಯ ವತಿಯಿಂದ 20ನೇ ಆವೃತ್ತಿಯ 'ಓಪನ್‌ಟೆಕ್ಸ್ಟ್ ಪ್ರೆಸೆಂಟ್ಸ್ ಬೆಂಗಳೂರು ವಾಕಥಾನ್' ನವೆಂಬರ್ 28ರಂದು ಬೆಳಿಗ್ಗೆ 9 ಗಂಟೆಗೆ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆಯಲಿದೆ. ಓಪನ್‌ಟೆಕ್ಸ್ಟ್ ಕಾರ್ಪೊರೇಟ್ ಸಿಟಿಜನ್‌ಶಿಪ್ ವಿಭಾಗದ ಉಪಾಧ್ಯಕ್ಷೆ ಜೂಲಿ ಮಿಲ್ಲಾರ್ಡ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಈ ವಾಕಥಾನ್ ಡಿಸೆಂಬರ್ 3ರಂದು ಆಚರಿಸಲಾಗುವ ವಿಶ್ವ ಅಂಗವಿಕಲರ ದಿನದ ಅಂಗವಾಗಿ ಪ್ರತಿ ವರ್ಷ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಅಂಕವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು, ಅವರಿಗೆ ಎಲ್ಲೆಡೆ ಸುಗಮ ಓಡಾಟದ ವ್ಯವಸ್ಥೆ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇದು ಪ್ರಮುಖ ಸಾರ್ವಜನಿಕ ಆಂದೋಲನವಾಗಿ ಬೆಳೆದಿದೆ ಎಂದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruJayanagarSamarthanamVakathan


