BLR Today
ಬುಧವಾರ, ಅಕ್ಟೋಬರ್ 7, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರJayanagar4 ಗಂಟೆಗಳ ಹಿಂದೆ

ಮರಳು ಅಕ್ರಮ ಸಾಗಾಟ: ಟಿಪ್ಪರ್, ಮರಳು ವಶ

ಮರಳು ಅಕ್ರಮ ಸಾಗಾಟ: ಟಿಪ್ಪರ್, ಮರಳು ವಶ
ಚಿತ್ರ: Prajavani

ಹೊಳೆನರಸೀಪುರ: ತಾಲ್ಲೂಕಿನ ಹುಲಿವಾಲ ಅಡಕೆ ಕೆರೆ ಹೊಸೂರು ಮಾರ್ಗದ ಜಯನಗರ ಗ್ರಾಮದಲ್ಲಿ ಹೇಮಾವತಿ ನದಿ ಮರಳನ್ನು ಅಕ್ರಮವಾಗಿ ಶೇಖರಿಸಿ ಸಾಗಣೆಗೆ ತಂದಿದ್ದ ಟಿಪ್ಪರನ್ನು ಹಾಗೂ ಸಾಗಿಸಲು ಶೇಖರಿಸಿಟ್ಟಿದ್ದ ಐದಾರು ಲೋಡ್‍ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ಟೋಬರ್ 4 ರಂದು ರಾತ್ರಿ ಮರಳು ಅಕ್ರಮ ಸಾಗಾಟ ಹಾಗೂ ಶೇಖರಣೆ ವಿಷಯ ತಿಳಿದ ಪೊಲೀಸರು ಎಎಸ್‌ಪಿ ಶುಭಂ ಪವಾರ್ ಸುರೇಶ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಎಸ್.ಐ. ಲತಾಕುಮಾರಿ ಹಾಗೂ ಸಿಬ್ಬಂದಿಯೊಂದಿಗೆ ತೆರಳಿದ ಪೊಲೀಸರು ಮರಳು ಸಾಗಾಟಕ್ಕೆ ಬಳಸಿದ್ದ ಚನ್ನರಾಯಪಟ್ಟಣದ ಪಾಂಡು ಎಂಬುವವರ ಟಿಪ್ಪರ್ ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಶೇಖರಿಸಿ ಇಟ್ಟಿದ್ದ ಐದಾರು ಲೋಡ್‍ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruJayanagarIllegal MiningPolice Action