ಆರ್ಎಸ್ಎಸ್ನಿಂದ ಸೇಡಂ ನಗರದಲ್ಲಿ ವಿಜಯದಶಮಿ ಪಥಸಂಚಲನ
ಸೇಡಂನಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಪಥಸಂಚಲನ ನಡೆಯಿತು. ನಗರದ ಮಾತೃಛಾಯ ಕಾಲೇಜಿನ ಆವರಣ ಹಾಗೂ ಹೌಸಿಂಗ್ ಬೋರ್ಡ್ ಕಾಲೊನಿಯ ಶ್ರೀ ಆಂಜನೇಯ ದೇವಸ್ಥಾನದಿಂದ ಎರಡು ತಂಡಗಳು ಪ್ರತ್ಯೇಕವಾಗಿ ಪಥಸಂಚಲನ ನಡೆಸಿದವು. ಒಂದು ತಂಡ ಬಸವನಗರ, ಇಂದಿರಾನಗರ, ವಿದ್ಯಾನಗರ, ಬಸವನಗರ ತಾಂಡಾ, ಡಿಬಿಆರ್ ಕಾಮಪೌಂಡ್, ಎಲ್ಎನ್ಟಿ ರಸ್ತೆ, ದೊಡ್ಡ ಅಗಸಿ, ರಂಗರೇಜಗಲ್ಲಿ, ಹೋಳಿ ಮೈದಾನ, ತೆಗ್ಗಿನಗೇರಿ ಹಲಕರ್ಟಿಗಲ್ಲಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿತು. ಇನ್ನೊಂದು ತಂಡವು ಹೌಸಿಂಗ್ ಬೋರ್ಡ್ ಕಾಲೊನಿಯ ಶ್ರೀ ಆಂಜನೇಯ ದೇವಸ್ಥಾನದಿಂದ ಹೊರಟು ಗಣೇಶನಗರ, ಊಡಗಿ ರಸ್ತೆ, ವೆಂಕಟೇಶನಗರ, ವಿದ್ಯಾನಗರ, ಮುಖ್ಯರಸ್ತೆ ಹಾಗೂ ರಥಬೀದಿ ಮಾರ್ಗವಾಗಿ ಚೌರಸ್ತಾ ತಲುಪಿದ ಎರಡೂ ತಂಡಗಳು ಕಿರಾಣ ಬಜಾರ್ ಮಾರ್ಗವಾಗಿ ಮಾತೃಛಾಯ ಕಾಲೇಜು ಆವರಣಕ್ಕೆ ಮರಳಿದವು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruIndiranagarreligion


