BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರHebbal4 ದಿನಗಳ ಹಿಂದೆ

ಹುಕ್ಕೇರಿ ಸೇರಿ 27 ಗ್ರಾಮಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಹುಕ್ಕೇರಿ ಸೇರಿ 27 ಗ್ರಾಮಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ
ಚಿತ್ರ: Prajavani

ಹುಕ್ಕೇರಿ ಹಾಗೂ ಇತರ 27 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ತಾಂತ್ರಿಕ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ನ.16 ರಿಂದ ನ.19ರವರೆಗೆ ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ದಡ್ಡಿ ಮತ್ತು 81 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಇದೀಗ ನೀರು ಶುದ್ದೀಕರಣ ಘಟಕದ ಹಳೆಯ ಏರೇಟರ್ ತೆರವುಗೊಳಿಸಿ ಹೊಸದಾಗಿ ನಿರ್ಮಿಸುವ ಪ್ರಮುಖ ತಾಂತ್ರಿಕ ಕಾಮಗಾರಿ ಆರಂಭಿಸಲಿದ್ದಾರೆ. ತಾಲ್ಲೂಕಿನ ಹೊಸೂರ, ಇಂಗಳಿ, ಹುನ್ನೂರ, ಯರನಾಳ, ಹೊಸಪೇಟ, ಬಡಕುಂದ್ರಿ, ಯರಗಟ್ಟಿ, ಗೌಡವಾಡ, ಕೋಚರಿ, ಅರ್ಜುನವಾಡ, ಕಮತನೂರ, ಗವನಾಳ, ಗೋಟೂರ, ನೇರಲಿ, ಮಸರಗುಪ್ಪಿ, ಹೆಬ್ಬಾಳ, ಅಂಕಲೆ, ಎಲಿಮುನ್ನೋಳಿ, ಹಣಜ್ಯಾನಟ್ಟಿ, ನಿಡಸೋಸಿ, ಅಮ್ಮಣಗಿ, ಕೇಸ್ತಿ, ಬೋರಗಲ್, ಅಮ್ಮಿನಭಾವಿ, ಯಾದಗೂಡ, ಬಸ್ತವಾಡ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
water supplyBengaluruinfrastructureBBMPBWSSB