ಒತ್ತುವರಿ ವಿಚಾರಕ್ಕೆ ಗಲಾಟೆ - ಯುವಕನ ಕೊಲೆ
ಬೆಂಗಳೂರಿನ ಹೊಸಕೋಟೆ ಸಮೀಪದ ಸೋಲೂರಿನಲ್ಲಿ ಒತ್ತುವರಿ ವಿಚಾರಕ್ಕೆ ಗಲಾಟೆ ನಡೆದು ಯುವಕನ ಕೊಲೆ ಆಗಿದೆ. ಲಿಖಿಕ್ ಗೌಡ (25) ಕೊಲೆಯಾದ ಯುವಕ. ಆಶ್ರಯ ಯೋಜನೆ ಜಮೀನು ಗುರುತು ಮಾಡುವ ಕಾರ್ಯದ ವೇಳೆ, ಸರ್ಕಾರಿ ಜಮೀನಿನ ಸುಮಾರು 10 ಗುಂಟೆ ಜಾಗವನ್ನು ಆರೋಪಿ ರಮೇಶ್ ಒತ್ತುವರಿ ಮಾಡಿಕೊಂಡಿದ್ದ. ಇದರಿಂದ ಒತ್ತುವರಿ ತೆರವಿಗೆ ಹೋಗಿದ್ದ ವೇಳೆ ರಮೇಶ್ ಮತ್ತು ಲಿಖಿತ್ ಗೌಡ ನಡುವೆ ಗಲಾಟೆ ನಡೆದಿದೆ. ಈ ವೇಳೆ ಲೈಸೆನ್ಡ್ ಗನ್ ನಿಂದ ರಮೇಶ್, ಲಿಖಿತ್ ಗೌಡ ಮೇಲೆ ಗುಂಡು ಹಾರಿಸಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹೊಸಕೋಟೆ ಪೊಲೀಸರು ಆರೋಪಿ ರಮೇಶ್‌ನನ್ನು ಬಂಧಿಸಿದ್ದಾರೆ.
ಮೂಲ ವರದಿ: Public TV
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
crimeBengaluruHoskoteSolur

