BLR Today
ಮಂಗಳವಾರ, ಸೆಪ್ಟೆಂಬರ್ 29, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ದಿನಗಳ ಹಿಂದೆ

ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ ಜಾಗೃತಿ ಕಾರ್ಯಕ್ರಮ

ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ ಜಾಗೃತಿ ಕಾರ್ಯಕ್ರಮ
ಚಿತ್ರ: Prajavani

ಬೆಂಗಳೂರಿನ ಎಂ.ಎಸ್‌.ರಾಮಯ್ಯ ನಗರದ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ 1,300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ನಟಿಯರಾದ ಶಾನ್ವಿ ಶ್ರೀವಾತ್ಸವ ಮತ್ತು ಕಾವ್ಯಾ ಶೆಟ್ಟಿ ಆರೋಗ್ಯಪೂರ್ಣ ಜೀವನಕ್ಕೆ ವ್ಯಾಯಾಮದ ಅಗತ್ಯ ಕುರಿತು ಮಾತನಾಡಿದರೆ, ಮಾರಿಯಾ ಚಂದ್ರ ಉತ್ತಮ ಆಹಾರ ಸೇವನೆ ಕುರಿತು ಮಾಹಿತಿ ನೀಡಿದರು. ವೈದ್ಯರಾದ ಮುಕ್ತಾ, ಮುಕುಂದನ್ ಶೇಷಾದ್ರಿ, ಅನುಪಮಾ ವಿ.ಹೆಗ್ಡೆ, ಜಿ.ಜಿ.ಶೆಟ್ಟಿ, ಸಂಜಯ್‌ ಎಸ್‌.ಭಟ್‌ ಮತ್ತು ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ.ಮದನ್ ಎಸ್‌.ಗಾಯಕ್‌ವಾಡ್ ಅವರು ಹೃದಯದ ಕಾಳಜಿ ಕುರಿತು ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಸಿಪಿಆರ್ ತರಬೇತಿ ಹಾಗೂ ಏರೋಬಿಕ್ಸ್, ಝುಂಬಾ, ಥಾಯ್‌ಚಿ ಸಮರ ಕಲೆಯ ಪಾಠಗಳನ್ನು ಕಲಿಸಲಾಯಿತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruHealthAwarenessHospital