BLR Today
ಸೋಮವಾರ, ಅಕ್ಟೋಬರ್ 26, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರಿನಲ್ಲಿ 5 ತಿಂಗಳು ಲಿವ್ ಇನ್ ರಿಲೇಶನ್‌ಶಿಪ್; ಹಾಸನ ಗೆಳೆಯನ ಮನೆ ಮುಂದೆ ಯುವತಿ ಧರಣಿ

ಬೆಂಗಳೂರಿನಲ್ಲಿ 5 ತಿಂಗಳು ಲಿವ್ ಇನ್ ರಿಲೇಶನ್‌ಶಿಪ್; ಹಾಸನ ಗೆಳೆಯನ ಮನೆ ಮುಂದೆ ಯುವತಿ ಧರಣಿ
ಚಿತ್ರ: Asianet Suvarna News

ಕಾಸರಗೋಡು ಮೂಲದ ಗಾಯಿತ್ರಿ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮನಹಳ್ಳಿ ಗ್ರಾಮದ ಸೂರ್ಯ ಎಂಬುವವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿ, ಸೂರ್ಯ ತನಗೆ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದು ಯುವತಿ ಗಾಯಿತ್ರಿ ಆರೋಪಿಸಿದ್ದಾರೆ. ಮೋಸ ಹೋದ ಯುವತಿ ಗಾಯಿತ್ರಿ ಅವರು ಕಲ್ಲೇಸೋಮನಹಳ್ಳಿ ಗ್ರಾಮದಲ್ಲಿರುವ ಸೂರ್ಯನ ಮನೆಯ ಮುಂಭಾಗದಲ್ಲಿಯೇ ಧರಣಿ ಕುಳಿತಿದ್ದಾರೆ. ಪ್ರಿಯಕರನ ಮೋಸದ ವಿರುದ್ಧ ಯುವತಿ ಗಾಯಿತ್ರಿ ಅವರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeDispute